ಕಾರವಾರ: ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರದಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ನೆಹರೂ ಯುವ ಕೇಂದ್ರ ಕಾರವಾರ ಮತ್ತು ಕಡಲಸಿರಿ ಯುವ ಸಂಘ ಕಾರವಾರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿದ್ಯಾ ನಾಯಕ, ಮುಖ್ಯ ಅತಿಥಿಗಳಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಯಶ್ವಂತ್ ಯಾದವ್, ಲೆಕ್ಕ ಪರಿಶೋಧಕಿ ಮೀರಾ ನಾಯ್ಕ, ಯೋಗ ಪರಿಣಿತ ಸಂಪನ್ಮೂಲ ವ್ಯಕ್ತಿಗಳಾದ ಕಮಲಾಕರ್ ಕಾಮಲೆ, ಕಾಲೇಜಿನ ಹಿರಿಯ ಉಪನ್ಯಾಸಕರಾದ ಗೀತಾ ವಾಲಿಕರ್, ಎನ್‌ಎಸ್‌ಎಸ್ ಘಟಕ 1 ಮತ್ತು ಘಟಕ 2 ಕಾರ್ಯಕ್ರಮ ಅಧಿಕಾರಿಗಳಾದ ವಿಜಯಶ್ರೀ ಗಾಂವ್ಕರ್, ಲೋಕೇಶ್ ಎನ್ ಪಿ. ಹಾಗೂ ಕಡಲ ಸಿರಿ ಯುವ ಸಂಘದ ಅಧ್ಯಕ್ಷ ಪ್ರಕಾಶ್ ಭೋವಿ, ಖಜಾಂಚಿ ಶಿವಂ ನಾಯ್ಕ ಸಂಘದ ಸದಸ್ಯರು ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.