• first
    second
    third
    previous arrow
    next arrow
  • ಸಾಳಮಕ್ಕಿ ಹಳ್ಳದ ಸೇತುವೆಗೆ 30ಲಕ್ಷ ಅನುದಾನ:ಶಾಸಕಿಯಿಂದ ಸ್ಥಳ ಪರಿಶೀಲನೆ

    300x250 AD

    ಕಾರವಾರ: ಹಲವು ವರ್ಷದ ಬೇಡಿಕೆಯಾಗಿದ್ದ ಗೋಟೆಗಾಳಿ ಗ್ರಾಮದ ಬರ್ಗಿಯ ಸಾಳಮಕ್ಕಿ ಹಳ್ಳದಿಂದ ಸಂದೀಪ್ ಗಾಂವಕರ ಮನೆಗೆ ಸಂಪರ್ಕಿಸುವ ಸೇತುವೆಗೆ 30 ಲಕ್ಷ ಅನುದಾನ ಒದಗಿಸಲಾಗಿದ್ದು, ಸೇತುವೆ ನಿರ್ಮಾಣ ಸ್ಥಳವನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ವೀಕ್ಷಿಸಿದರು.

    ಬಳಿಕ ಅವರು ಮಾತನಾಡಿ, ಹಿಂದೆ ಸರಿಯಾದ ರಸ್ತೆಗಳಿಲ್ಲದೆ ಇಲ್ಲಿಯ ಜನರು ಓಡಾಟಕ್ಕೆ ತೊಂದರೆ ಅನುಭವಿಸುತ್ತಿದ್ದರು. ಈಗ ಅನೇಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಇನ್ನು ಕೆಲವು ರಸ್ತೆಗಳಿಗೆ ಅನುದಾನವನ್ನು ಒದಗಿಸಲಾಗಿದ್ದು, ಶೀಘ್ರದಲ್ಲೇ ನಿರ್ಮಾಣವಾಗಲಿವೆ ಎಂದರು.

    ಯಾವುದೇ ಒಂದು ವಸ್ತುವನ್ನು ತರಬೇಕಿದ್ದರೂ ದೂರದ ಸ್ಥಳಕ್ಕೆ ಹೋಗಬೇಕಾಗಿತ್ತು. ಈಗ ರಸ್ತೆಗಳು ನಿರ್ಮಾಣವಾಗಿದೆ. ಅಂಗಡಿಗಳಿಗೆ ಹೋಗಿ ಬರಬಹುದಾಗಿದೆ. ಹಿಂದೆ ಯಾರೂ ಮಾಡಿರದ ಸೇತುವೆಗೆ ಅನುದಾನವನ್ನು ಒದಗಿಸಲಾಗಿದೆ. ಅದೇ ರೀತಿ ಮಳೆಗಾಲದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಶಾಲೆಗೆ ಹೋಗಲು ಸಮಸ್ಯೆಯನ್ನು ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹಲವು ವರ್ಷಗಳಿಂದ ಹಳ್ಳಕ್ಕೆ ತಾತ್ಕಾಲಿಕ ಕಟ್ಟಿಗೆ ಸೇತುವೆ ನಿರ್ಮಿಸಿಕೊಂಡು ಓಡಾಡುತ್ತಿರುವುದು ಮನಗಂಡು ಅದಕ್ಕಾಗಿ, ಬರ್ಗಿ ಹಳ್ಳಕ್ಕೆ 30 ಲಕ್ಷ ಅನುದಾನವನ್ನು ಒದಗಿಸಲಾಗಿದೆ. ಶೀಘ್ರವಾಗಿ ಸೇತುವೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

    300x250 AD

    ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಸಮಸ್ಯೆ ವ್ಯವಸ್ಥೆ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮಿನಿ ಬಸ್ ಅಥವಾ ದೊಡ್ಡ ಬಸ್ ಬಿಡುವ ಕುರಿತು ಸೂಚಿಸಲಾಗಿದೆ. ಸೋಮವಾರದಿಂದ ಬಸ್ ಸಂಚಾರ ಆರಂಭಿಸಲಿದೆ ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಗೋಟೆಗಾಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಭಾ, ಉಪಾಧ್ಯಕ್ಷೆ ವರ್ಷಾ, ಸದಸ್ಯರಾದ ಅನಿಲ, ಸುಧಾಕರ ವೇಳಿಪ್, ಪ್ರಶಾಂತ ಗಾಂವಕರ, ತಹಶಿಲ್ದಾರ ಎನ್.ಎಫ್.ನರೋನ, ಹೆಸ್ಕಾಂ ಅಧಿಕಾರಿಗಳು ಇದ್ದರು.

    Share This
    300x250 AD
    300x250 AD
    300x250 AD
    Back to top