ಶಿರಸಿ: ತಾಲೂಕಿನ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಮುಷ್ಠಗಿ ಗ್ರೂಪ್ಸ ಪ್ರಾಯೋಜಕತ್ವದಲ್ಲಿ ನಡೆಸಿದ ಉತ್ತರಕನ್ನಡ ಜಿಲ್ಲಾಮಟ್ಟದ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿಯು ಇತ್ತೀಚಿಗೆ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕ್ರಿಕೆಟ ಪಂದ್ಯಾವಳಿಯಲ್ಲಿ ಗಣ್ಯರಾದ ಜಿ.ಎಂ.ಹೆಗಡೆ ಮುಳಖಂಡ, ಡಾ. ಎಸ್.ಕೆ.ಹೆಗಡೆ,ಅನಿಲ್‌ಕುಮಾರ ಮುಷ್ಠಗಿ, ಶ್ರೀಮತಿ ವಿಶಾಲಾ ಅನಿಲ್‌ಕುಮಾರ ಮುಷ್ಠಗಿ,ಉಪೇಂದ್ರ ಪೈ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ “Ashish Brothers“ ಕಾರವಾರ ತಂಡ ಪ್ರಥಮ ಸ್ಥಾನ ಹಾಗೂ “Maarikamba Eleven“ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎಂ.ಇ.ಎಸ್. ವಿದ್ಯಾರ್ಥಿಗಳ ಕಾಮರ್ಸ್ ಟ್ರೋಫಿ ಯಶಸ್ವಿ
