ಸಿದ್ದಾಪುರ: 8 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಿದ್ದಾಪುರದ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವ ಮೂಲಕ ಅರ್ಥಪೂರ್ಣವಾಗಿ ಯೋಗ ದಿನಾಚರಣೆ ಆಚರಿಸಲಾಯಿತು.
ಈಶಾ ಪ್ರತಿಷ್ಠಾನದ ಹಠಯೋಗ ಶಿಕ್ಷಕರಾದ ವಿನಾಯಕ ಹೆಗಡೆ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳ ಯೋಗಕ್ಷೇಮ ಹಾಗೂ ಮಾನಸಿಕ ತೀಕ್ಷ್ಣತೆಯನ್ನು ವರ್ಧಿಸುವ ಯೋಗಾಭ್ಯಾಸಗಳನ್ನು ಅಭ್ಯಸಿಸಲಾಯಿತು.
ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಒತ್ತಡ ಕಡಿಮೆಯಾಗಿ ಮಾನಸಿಕ ನೆಮ್ಮದಿಯು ವೃದ್ಧಿಸಿ ಉತ್ತಮ ಅಂಕಗಳಿಸುವಲ್ಲಿ ಸಹಕಾರಿಯಾಗುತ್ತದೆ ಮತ್ತು ಯೋಗ ಎನ್ನುವುದು ಯಾವುದೇ ಧರ್ಮಕ್ಕೆ ಸೀಮಿತವಾಗದೆ ಇಡೀ ವಿಶ್ವಕ್ಕೆ ಸೇರಿದ್ದು ಎಂದು ಪ್ರಾಂಶುಪಾಲರಾದ ಯು.ಟಿ.ಹೆಗ್ಡೆಯವರು ಈ ಸಂದರ್ಭದಲ್ಲಿ ಮಕ್ಕಳಿಗೆ ತಿಳಿಸಿದರು.