ಯಲ್ಲಾಪುರ: ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯ ಮಾವಳ್ಳಿ ಗ್ರಾಮದಲ್ಲಿ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಗೆ ಪರಿವರ್ತಿಸುವಂತೆ ಗ್ರಾಮಸ್ತರು ಗುರುವಾರ ಕಣ್ಣಿಗೇರಿ ಪಂಚಾಯತಕ್ಕೆ ತೆರಳಿ ಮನವಿ ಸಲ್ಲಿಸಿದರು.
ಮಾವಳ್ಳಿಯ ಶಿವಾ ಮರಾಠಿ ಮನೆಯಿಂದ ನಾಗೇಶ ಢಾಕ್ಯಾ ಮರಾಠಿ ಮನೆಯವರೆಗೆ ಸಾರ್ವಜನಿಕ ಕಚ್ಚಾ ರಸ್ತೆ ಇದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದು, ರಸ್ತೆ ಸಂಪೂರ್ಣವಾಗಿ ಕೆಸರಿನಿಂದ ತುಂಬಿಕೊಳ್ಳುತ್ತದೆ. ರಸ್ತೆ ತೀರಾ ಹದಗೆಟ್ಟಿರುವುದರಿಂದ ಈ ರಸ್ತೆಯಲ್ಲಿ ಪ್ರತಿದಿನ ಓಡಾಡುವ ದ್ವಿ ಚಕ್ರ ವಾಹನ ಸವಾರರಿಗೆ ಹಾಗೂ ಶಾಲಾ- ಕಾಲೇಜು ಮಕ್ಕಳಿಗೆ ತುಂಬಾ ತೊಂದರೆ ಆಗಿದೆ. ಕಾರಣ ಸ್ಥಳೀಯ ನಿವಾಸಿಗಳ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಸೌಕರ್ಯದಿಂದ ವಂಚಿತರಾಗಿದ್ದು, ಈ ರಸ್ತೆ ನಿರ್ಮಾಣ ಕಾರ್ಯ ಮಾಡುವುದು ತೀರಾ ಅತ್ಯಗತ್ಯವಾಗಿರುತ್ತದೆ. ಪಕ್ಕಾ ರಸ್ತೆಗಾಗಿ ಇಲ್ಲಿಯ ಜನ ಬಹುದಿನಗಳಿಂದ ಮೌಖಿಕವಾಗಿ ಬೇಡಿಕೆ ಇಡುತ್ತಾ ಬಂದಿದ್ದರೂ ಕೂಡ ಇದುವರೆಗೂ ರಸ್ತೆಯ ಬೇಡಿಕೆ ಈಡೇರಿಲ್ಲ. ಈ ರಸ್ತೆಯ ಸ್ಥಿತಿಗತಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸಿಮೆಂಟ್ ಅಥವಾ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರು ನೀಡುವ ಕ್ರಮ ಜರುಗಿಸಬೇಕೆಂದು ವಿನಂತಿಸಿದ್ದಾರೆ.
ಮಾವಳ್ಳಿ ನಿವಾಸಿಗಳಾದ ನಾಗೇಶ ಮರಾಠಿ, ಶಿವರಾಜ್ ಮರಾಠಿ, ಶೋಭಾ ಮರಾಠಿ, ಅಶ್ವಿನ್ ಮರಾಠಿ, ರಾಜನ್ ಮರಾಠಿ, ಶ್ರೀಕಾಂತ್ ದುರ್ಗಾ ಮರಾಠಿ, ಶಿವ ಮರಾಠಿ, ಗಿರೀಶ್ ಮರಾಠಿ, ಸುರೇಶ್ ಮರಾಠಿ, ಲಕ್ಷ್ಮಣ್ ಮರಾಠಿ ವಿಘ್ನೇಶ್ವರ್ ಮರಾಠಿ, ಶ್ರೀಕಾಂತ್ ಮರಾಠಿ, ಮೋಹನ್ ಮರಾಠಿ, ಈಶ್ವರ್ ಮರಾಠಿ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿದ್ದರು. ಕಣ್ಣಿಗೇರಿ ಗ್ರಾ.ಪಂ ಕಾರ್ಯದರ್ಶಿ ವಸಂತ ಕಟ್ಟಿಮನಿ ಪಿಡಿಓ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು