• first
  second
  third
  previous arrow
  next arrow
 • ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ

  300x250 AD

  ದಾಂಡೇಲಿ: ನಗರದ ರೋಟರಿ ಕ್ಲಬ್ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ರೋಟರಿ ಶಾಲೆಯ ಸಭಾಭವನದಲ್ಲಿ ನ್ಯಾಷನಲ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಗಣೇಶ್ ಕೆ.ಎಲ್., ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಆ ಕಾರಣಕ್ಕಾಗಿ ಇಂದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ತೊಡಗಿಕೊಂಡ ಶಿಕ್ಷಕರನ್ನು ಗುರುತಿಸಿ, ಗೌರವಿಸುವ ಕಾರ‍್ಯ ಶ್ಲಾಘನೀಯವಾಗಿದೆ. ಈ ಕಾರ‍್ಯಕ್ರಮ ಮುಂದಿನ ಸಾಧನೆಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಲೆಂದರು.

  ರೋಟರಿ ಕ್ಲಬ್ ನ ಅಧ್ಯಕ್ಷ ಯೋಗೇಶ್ ಸಿಂಗ್, ಕಳೆದ ಅನೇಕ ವರ್ಷಗಳಿಂದ ಎಸೆಸೆಲ್ಸಿಯಿಂದ ಸ್ವಾತಕೋತ್ತರ ಪದವಿಯವರೆಗೆ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ‍್ಯವನ್ನು ಮತ್ತು ಅತ್ಯುತ್ತಮ ಶೈಕ್ಷಣಿಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕರು ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿಕೊಂಡು ಬರಲಾಗುತ್ತಿದೆ. ಸಾಧನೆಯ ವೀರರನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಹೆಚ್ಚು ಹೆಚ್ಚು ಸಾಧನೆಯ ಸರದಾರರು ಉದಯವಾಗಲು ಸಾಧ್ಯ ಎಂದರು.

  ದಾಂಡೇಲಿ ನಗರದ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರುಗಳಾದ ನಾಗರತ್ನ ಪಡಸಲಗಿ, ಗಣಪತಿ ನಾಯ್ಕ, ಲತಾ ಮದನ್ ಶೇಠ್, ಪವಿತ್ರ ಮಡಿವಾಳ, ಭಾವನಾ ವಾಲ್ಕೆ, ವೀಣಾ ಗಾಂವಕರ, ಶಶಿಕಲಾ ಬಂಟ್, ವಿಜಯಲಕ್ಷ್ಮಿ ಕಲ್ಲಗುಡಿ, ಸುಭಾಸ ನಾಯ್ಕ, ಕೃಷ್ಣ ನಾಯ್ಕ ಅವರುಗಳಿಗೆ ರಾಷ್ಟ್ರ ನಿರ್ಮಾಪಕರು ಎಂಬ ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು. ದಾಂಡೇಲಿ ನಗರದಲ್ಲಿ ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಸಾಧನೆಗೈದ ಪ್ರತಿಭಾನ್ವಿತ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

  300x250 AD

  ರೋಟರಿ ಕ್ಲಬಿನ ಹಿರಿಯ ಸದಸ್ಯರಾಸದ ಎಸ್.ಜಿ.ಬಿರದಾರ ಅವರು ಕರ‍್ಯಕ್ರಮದ ಉದ್ದೇಶವನ್ನು ವಿವರಿಸಿ, ಸಾಧನೆಯನ್ನು ಪ್ರೋತ್ಸಾಹಿಸಿದಾಗ ಇನ್ನಷ್ಟು ಹೆಚ್ಚು ಸಾಧನೆಗಳು ಮಾಡಲು ಸಾಧ್ಯ ಎಂದರು. ವೇದಿಕೆಯಲ್ಲಿ ರೋಟರಿ ಕ್ಲಬಿನ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಸುಧಾಕರ ಶೆಟ್ಟಿ, ದೀಪಕ ಬಾಂದಗೆ ಉಪಸ್ಥಿತರಿದ್ದರು.

  ರೋಟರಿ ಕ್ಲಬಿನ ರಾಹುಲ್ ಬಾವಾಜಿ ರೋಟರಿ ಪ್ರಾರ್ಥನೆ ಹಾಡಿದರು. ಯೋಗೇಶ್ ಸಿಂಗ್ ಸ್ವಾಗತಿಸಿದರು. ಮಿಥುನ್ ನಾಯಕ ವಂದಿಸಿದರು. ಸೋಮಕುಮಾರ್.ಎಸ್ ಕರ‍್ಯಕ್ರಮವನ್ನು ನಿರೂಪಿಸಿದರು. ಕರ‍್ಯಕ್ರಮದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು, ಸದಸ್ಯರುಗಳು, ರೋಟರಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ರೋಟರಿ ಶಾಲೆಯ ಶಿಕ್ಷಕ ವೃಂದ ಹಾಗೂ ನಗರದ ವಿವಿಧ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Back to top