ಕಾರವಾರ: ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ, ಸಿಡಾಕ್ ಕಾರವಾರ ಹಾಗೂ ಸಾಪ್ಟೆಕ್ ಕಂಪ್ಯೂಟರ್ಸ್ ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ ಜೂ.28ರ ಬೆಳಿಗ್ಗೆ 10.30 ಗಂಟೆಗೆ ದಾಂಡೇಲಿ ಕರ್ನಾಟಕ ಭವನದಲ್ಲಿ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ಆಸಕ್ತ 18 ರಿಂದ 40 ವರ್ಷದೋಳಗಿನ ಹಾಗೂ ಕನಿಷ್ಠ ಓದುವದಕ್ಕೆ ಹಾಗೂ ಬರೆಯುವದಕ್ಕೆ ಬರುವವರು ಶಿಬಿರಕ್ಕೆ ಹಾಜರಾಗಬಹುದು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವ ಮುಂತಾದ ವಿಷಯಗಳನ್ನು ತಿಳಿಸಲಾಗುವದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿಗಾಗಿ ಸಿಡಾಕ್ ಕಾರವಾರ ಉಪ ನಿರ್ದೇಶಕ ಶಿವಾನಂದ ವೆಂ.ಎಲಿಗಾರ (ಮೊ.ಸಂಖ್ಯೆ: 94488 12974), ಸಿಡಾಕ್ ತರಬೇತುದಾರ ಶಿವರಾಜ ಹೆಳವಿ (ಮೊ.ಸಂಖ್ಯೆ: 87227 08795) ಅವರಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಉದ್ಯಮಶೀಲಾತಾಭಿವೃದ್ಧಿ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.