ಶಿರಸಿ: ಜಿಲ್ಲೆಯ ಏಕೈಕ ಮತ್ತು ರಾಜ್ಯದ ಕೆಲವೇ ಸುಸಜ್ಜಿತ ನೇತ್ರಭಂಡಾರಗಳಲ್ಲಿ ಒಂದಾದ ಲಯನ್ಸ್ ನಯನ ನೇತ್ರಭಂಡಾರದ ಉನ್ನತೀಕರಣದ ಉದ್ಘಾಟನಾ ಕಾರ್ಯಕ್ರಮವನ್ನು ಜೂ. 25, ಶನಿವಾರ ಮಧ್ಯಾಹ್ನ 4 ಘಂಟೆಗೆ ಆಯೋಜಿಸಲಾಗಿದೆ.
ಮೂವತ್ತು ಲಕ್ಷ ರೂಪಾಯಿ ಮೌಲ್ಯದ “Eye bank Specular microscope” ಆಧುನಿಕ ಉಪಕರಣ ಅನಾವರಣಗೊಳ್ಳಲಿದೆ.
ಈ ಉಪಕರಣದಿಂದ ದಾನಪಡೆದ ಕಾರ್ನಿಯ (ಕಪ್ಪು ಗುಡ್ಡೆ) ದ ಸವಿವರ ಪರೀಕ್ಷೆ ನಡೆಸಿ ಅದರ ಗುಣಮಟ್ಟದ ಅನುಸಾರವಾಗಿ ಗ್ರೇಡಿಂಗ್ ಮಾಡಲಾಗುತ್ತದೆ. ಇದರಿಂದ ಯಾವ ಕಾರ್ನಿಯ ಯಾವ ರೋಗಿಗೆ ಕಸಿ ಮಾಡಬಹುದು ಎಂದು ನಿರ್ದಿಷ್ಟವಾಗಿ ತಿಳಿದು ಕಸಿ ಶಸ್ತ್ರಚಿಕಿತ್ಸೆಯ ಯಶಸ್ಸು ಹೆಚ್ಚುವುದು. ಹಾಗೆಯೇ ನಮ್ಮಲ್ಲಿ ಒಮ್ಮೊಮ್ಮೆ ಉಪಯೋಗವಾಗದೇ ಉಳಿಯುವ ಕಾರ್ನಿಯಗಳನ್ನು ಬೇರೆ ಕೇಂದ್ರಗಳಿಗೆ ಕಳುಹಿಸಲು ಈ ಪರೀಕ್ಷೆಯ ವರದಿ ಕಡ್ಡಾಯ.ಹಾಗಾಗಿ ಈ ಉಪಕರಣದ ಸಹಾಯದಿಂದ ಅತಿ ವಿರಳವಾಗಿ ನಡೆಯುವ ನೇತ್ರದಾನದ ನಡುವೆಯೂ ದಾನಪಡೆದ ಕಾರ್ನಿಯ ವ್ಯರ್ಥವಾಗದೆ ಅದರ ಬಳಕೆಯನ್ನು ಹೆಚ್ಚಿಸಬಹುದಾಗಿದೆ.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಆಗಮಿಸಲಿದ್ದು,ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಉದಯ್ ಸ್ವಾದಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರವಿ ಹೆಗಡೆ ಹೂವಿನಮನೆ ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೂ.25ಕ್ಕೆ ಲಯನ್ಸ್ ನಯನ ನೇತ್ರಭಂಡಾರದ ಉನ್ನತೀಕರಣ ಉದ್ಘಾಟನಾ ಕಾರ್ಯಕ್ರಮ
