• Slide
    Slide
    Slide
    previous arrow
    next arrow
  • ಚಿಕ್ಕಪುಟ್ಟ ವ್ಯಾಜ್ಯಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳುವುದು ಒಳಿತು: ಕುಮಾರ್ ಜಿ.

    300x250 AD

    ಹೊನ್ನಾವರ: ನ್ಯಾಯಾಲಯಗಳಲ್ಲಿನ ಚಿಕ್ಕಪುಟ್ಟ ವ್ಯಾಜ್ಯಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಕಕ್ಷಿದಾರರ ನಡುವಿನ ಪರಸ್ಪರ ದ್ವೇಷ, ಅಸೂಯೆ ಕಡಿಮೆಯಾಗಿ, ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸಿವಿಲ್ ಜಡ್ಜ್ ಹಿರಿಯ ವಿಭಾಗೀಯ ನ್ಯಾಯಾಧೀಶ ಕುಮಾರ ಜಿ. ಹೇಳಿದರು.

    ಜೂನ್ ೨೫ರಂದು ಹೊನ್ನಾವರದ ನ್ಯಾಯಾಲಯದ ಆವರಣದಲ್ಲಿ ನಡೆಯಲಿರುವ ಲೋಕ್ ಅದಾಲತ್ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್ ಪ್ರಾಧಿಕಾರವು ಹಮ್ಮಿಕೊಂಡಿರುವ ಲೋಕ್ ಅದಾಲತ್ ಕಾರ್ಯಕ್ರಮದ ಸದುಪಯೋಗಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ರಾಜಿ ಮಾಡಬಹುದಾದ ಚಿಕ್ಕ-ಪುಟ್ಟ ಕ್ರ‍್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ವಿದ್ಯುತ್ ಶುಲ್ಕ ಬಾಕಿ ಪ್ರಕರಣಗಳು, ಪ.ಪಂ ಟೆಕ್ಸ ಪ್ರಕರಣಗಳು, ಭೂಸ್ವಾದಿನ ಪ್ರಕರಣಗಳನ್ನು,ಅಮಲ್ಜಾರಿ ಪ್ರಕರಣಗಳನ್ನು ಸೌಹಾರ್ದಯುತವಾಗಿ ರಾಜಿ ಮೂಲಕ ಇತ್ಯರ್ಥ ಪಡಿಸಲು ಅವಕಾಶ ಇರುವುದಾಗಿ ತಿಳಿಸಿದರು.

    300x250 AD

    ಈ ಸಂದರ್ಭದಲ್ಲಿ ಪ್ರಿನ್ಸಿಪಲ್ ಜೆಎಂಎಫ್‌ಸಿ ಹಾಗೂ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಧೀಶ ಚಂದ್ರಶೇಖರ ಬಣಕಾರ್, ವಕೀಲರ ಸಂಘದ ಅಧ್ಯಕ್ಷ ಜಿ.ವಿ.ಭಟ್, ಕಾರ್ಯದರ್ಶಿ ಮನೋಜ ಜಾಲಿಸತ್ಗಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top