ಶಿರಸಿ: ಶ್ರೀರಾಮ, ಸೀತಾಮಾತೆ, ಹನುಮಂತ ದೇವರ ಅವಹೇಳನ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮಿ ಅಲಿಯಾಸ್ ತಬಸ್ಸುಮ್, ಅನಿಲ್ ಹಾಗೂ ಮತ್ತಿತರರ ವಿರುದ್ಧ ದೂರು ನೀಡಿ FIR ದಾಖಲಿಸುವಂತೆ ಶಿರಸಿಯ ಸಿಪಿಐ ಹಾಗೂ ನಗರ ಠಾಣೆಯ ಪಿಎಸ್ಐ ಬಳಿ ಶಿರಸಿಯ ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿ, ಲಿಖಿತವಾಗಿ ದೂರು ನೀಡಿರುತ್ತಾರೆ.
ಆದರೆ ಪೋಲಿಸರು ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಿ FIR ದಾಖಸುತ್ತೇವೆ ಎಂಬ ಉತ್ತರ ನೀಡಿದ್ದು, ಒಂದು ವೇಳೆ ಪೋಲಿಸರು FIR ದಾಖಲಿಸದಿದ್ದಲ್ಲಿ ಹಿಂದೂ ಸಂಘಟನೆಗಳು ನ್ಯಾಯಾಲಯದ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕಿಡಿಗೇಡಿಗಳ ವಿರುದ್ಧ FIR ದಾಖಲಿಸಲಿದ್ದು, ಈ ಮೂಲಕ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗುವವರೆಗೂ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.
ಹಿಂದೂ ದೇವರ ಅವಹೇಳನ ಹಿನ್ನೆಲೆ: FIR ದಾಖಲಿಸುವಂತೆ ಮನವಿ ಸಲ್ಲಿಕೆ
