ಕಾರವಾರ; ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೋರ್ವಳ ಗಮನವನ್ನು ಬೇರಡೆ ಸೆಳೆದು ಆಕೆಯ ಕೈಯಲ್ಲಿದ್ದ ಬ್ಯಾಗ್ ಮತ್ತು ಅದರಲ್ಲಿದ್ದ 1400 ರೂ. ಹಾಗೂ ಮೊಬೈಲ್ ಕಳ್ಳತನ ಎಸಗಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಸದಾಶಿವಗಡದ ಅರ್ಜುನಕೋಟ ನಿವಾಸಿಯಾದ ಮೀನಾಕ್ಷಿ ನಾಯರ್ ಎಂಬಾಕೆ ಜಿಲ್ಲಾಸತ್ರೆಯ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಬಳಿದ್ದ ಬ್ಯಾಗ್‌ನ್ನು ಲಪಟಾಯಿಸುವ ಉದ್ದೇಶದಿಂದ ಮಹಿಳೆಯ ಬೆನ್ನಿನ ಮೇಲೆ ಏನೋ ಬಿದ್ದಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದು ಆಕೆಯ ಕೈಯಲ್ಲಿದ್ದ ಬ್ಯಾಗ್, ಅದರಲ್ಲಿದ್ದ ಹಣ ಹಾಗೂ ಸ್ಯಾಕ್ಸಿಂಗ್ ಗ್ಯಾಲಾಕ್ಸಿ ಎ-10 ಮೊಬೈಲ್‌ನ್ನು ಎಗರಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಹಿಳೆ ನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಗಮನ ಬೇರೆಡೆ ಸೆಳೆದು ಮಹಿಳೆಯ ಬ್ಯಾಗ್ ಎಗರಿಸಿದ ಕಳ್ಳ
