• first
  second
  third
  previous arrow
  next arrow
 • ಆರ್ಭಟವಿಲ್ಲದ ಮುಂಗಾರು:ಜೀವವಿಲ್ಲದಂತಾದ ಏಂಡಿ ಮೀನುಗಾರಿಕೆ

  300x250 AD

  ಕಾರವಾರ: ಮುಂಗಾರಿನ ಮಳೆಯಾರ್ಭಟದ ಕಡಲಬ್ಬರಕ್ಕೆ ನಗರದ ಕಡಲತೀರದಲ್ಲಿ ಏಂಡಿ ಬಲೆಗೆ ಸಿಗುತ್ತಿದ್ದ ರಾಶಿ-ರಾಶಿ ತಾಜಾ ಮೀನುಗಳು ಕಣ್ಮರೆಯಾಗಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಯಾಂತ್ರಿಕ ಮೀನುಗಾರಿಕೆಗೆ ಬ್ರೇಕ್ ಹಾಕಿ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ಮೀನುಗಾರರು ಮಳೆಗಾಲ ಆರಂಭವಾಗಿ ಹದಿನೈದು ದಿನ ಕಳೆದರೂ ಮುಂಗಾರಿನ ಆರ್ಭಟ ಇಲ್ಲದ ಪರಿಣಾಮ ಏಂಡಿ ಮೀನುಗಾರಿಕೆ ಜೀವವಿಲ್ಲದಂತಾಗಿದೆ. ಜೂನ್ ಒಂದರಿಂದ ಎರಡು ತಿಂಗಳ ಕಾಲ ಯಾಂತ್ರಿಕ ಮೀನುಗಾರಿಕೆಗೆ ಸಂಪೂರ್ಣ ನಿರ್ಬಂಧ ಇರುವುದರಿಂದ ಮೀನುಗಾರರಿಗೆ ಸಾಂಪ್ರದಾಯಿಕ ಎಂಡಿ ಬಲೆ ಮೀನುಗಾರಿಕೆಯೇ ಜೀವನಾಧಾರ. ಯಾಂತ್ರಿಕ ಮೀನುಗಾರಿಕೆ ಸ್ಥಗಿತವಾಗಿರುವದರಿಂದ ಮೀನುಗಾರರು ಈ ಬಂಡಿ ಮೀನುಗಾರಿಕೆಯನ್ನೇ ಅವಲಂಬಿಸುವುದರಿಂದ ಕೊಂಚ ಆದಾಯಕ್ಕೂ ಕಾರಣವಾಗುತ್ತದೆ. ಮೀನುಗಾರರು ನಸುಕಿನಿಂದಲೇ ಏಂಡಿ ಮೀನುಗಾರಿಕೆಗೆ ಸಮುದ್ರಕ್ಕಿಳಿಯುತ್ತಿದ್ದರು. ಆದರೆ ಈ ವರ್ಷ ಮುಂಗಾರಿನ ಆರ್ಭಟ ಕೈಕೊಟ್ಟಿದ್ದು ಸಾಂಪ್ರದಾಯಿಕ ಮೀನುಗಾರರಿಗೆ ನಿರಾಸೆ ಮೂಡಿಸಿದೆ.

  ಈ ವರ್ಷದ ಮುಂಗಾರು ರೈತರಿಗೆ ಕೈಕೊಟ್ಟಂತೆ ಮೀನುಗಾರರಿಗೂ ಕೈಕೊಟ್ಟಿದೆ. ಉತ್ತಮ ಮಳೆಯಾದರೆ ಮಾತ್ರ ಸಮುದ್ರದಲ್ಲಿ ಮೀನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.ಭಾರೀ ಮಳೆ ಉಂಟಾದಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವದರಿಂದ ಮೀನುಗಳು ಸಮುದ್ರ ದಡದಲ್ಲಿ ಬಂದು ಮರಿ ಹಾಕುತ್ತವೆ. ಸಮುದ್ರದ ಅಬ್ಬರಕ್ಕೆ ದಡದತ್ತ ಬರುವ ವಿವಿಧ ಜಾತಿಯ ಮೀನುಗಳು ಏಂಡಿ ಮೀನುಗಾರರ ಪಾಲಾಗುತ್ತಿದ್ದವು. ಕಳೆದ ವರ್ಷ ಈ ಸಮಯದಲ್ಲಿ ಏಂಡಿ ಮೀನುಗಾರಿಕೆ ನೂರಾರು ಬುಟ್ಟಿ ಮೀನುಗಳು ಲಭಿಸಿದ್ದವು. ಆದರೆ ಈ ವರ್ಷದ ಒಂದೆರಡು ಬುಟ್ಟಿ ಮೀನು ಸಿಗುವುದು ಸಹ ದುಸ್ತರವಾಗಿದೆ. ಹೀಗಾಗಿ ಏಂಡಿ ಮೀನುಗಾರಿಕೆ ಪ್ರಾರಂಭಿಸಲು ಆಸಕ್ತಿ ಇಲ್ಲವಾಗಿದೆ ಎಂದು ಮೀನುಗಾರರು ನಿರಾಸೆ ವ್ಯಕ್ತಪಡಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top