ಕುಮಟಾ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಈಶ್ವರ್ ಎಚ್.ನಾಯ್ಕರನ್ನು ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಾರ್ದಿಕವಾಗಿ ಸ್ವಾಗತಿಸಲಾಯಿತು.ಹಾಗೂ ಅವರ ಹುಟ್ಟುಹಬ್ಬ ನಿಮಿತ್ತ ಜಿಲ್ಲಾ ಸಂಘದ ವತಿಯಿಂದ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಉಪನಿರ್ದೇಶಕರ ಜೊತೆಯಲ್ಲಿ ಶಿಕ್ಷಕರ ಜಿ. ಪಿ.ಎಫ್ ಮುಂಗಡ ಹಾಗೂ ಭಾಗಶಃ ಸಮಸ್ಯೆಗಳ ಕುರಿತು ತಕ್ಷಣ ವಿಲೇವಾರಿ ಮಾಡುವ ಬಗ್ಗೆ, ಎನ್.ಪಿ.ಎಸ್. ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು 2005ರಲ್ಲಿ ನೋಟಿಫಿಕೇಶನ್ ಆದ ಹಾಗೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಆಗಿದ್ದು 2007ರಲ್ಲಿ ನೇಮಕಾತಿ ಆದೇಶ ಆದ ಶಿಕ್ಷಕರ ಮಾಹಿತಿಯನ್ನು ಪಡೆದು ಅವರಿಗೆ ಓ ಪಿ ಎಸ್ ಸೌಲಭ್ಯ ದೊರೆಯುವಂತೆ ಮಾಹಿತಿ ಪಡೆಯುವುದು, ಹಾಗೂ ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಹಾಗೂ ಕಾರವಾರದ ಕೆಲವು ಶಾಲೆಗಳಿಗೆ ಬಿಸಿಯೂಟ ಅಡುಗೆ ಸಿಲೆಂಡರ್‌ಗಳನ್ನು ಏಜೆನ್ಸಿಯವರು ಪೂರೈಕೆ ಮಾಡದ ಕುರಿತು, ಶಾಲೆಗಳಲ್ಲಿ ಶಿಕ್ಷಕರೇ ನಗದು ಹಣ ನೀಡಿ ಸಿಲೆಂಡರ್ ಪಡೆಯುವ ಕುರಿತು ಚರ್ಚಿಸಲಾಯಿತು. ಹೆಚ್ಚುವರಿ ಶಿಕ್ಷಕರ ಸಮಸ್ಯೆಗಳ ಕುರಿತು ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸಲಾಯಿತು, ಹಾಗೂ ಕಲಿಕಾ ಚೇತರಿಕ ಕಾರ್ಯಕ್ರಮದ ಅನುಷ್ಠಾನದಲ್ಲಿ ಆಗುವ ತೊಂದರೆ ಬಗ್ಗೆ ಚರ್ಚಿಸಲಾಯಿತು. ಯೋಗ ದಿನವನ್ನು ಯಶಸ್ವಿಯಾಗಿ ಶಾಲಾ ಹಂತದಲ್ಲಿ ನಡೆಸಲು ಸಹಕರಿಸಬೇಕೆಂದು ಉಪನಿರ್ದೇಶಕರು ಸೂಚಿಸಿದರು.ಸಂಘದ ಮನವಿಯನ್ನು ಆಲಿಸಿದ ಉಪನಿರ್ದೇಶಕರು ತಕ್ಷಣ ಅಕ್ಷರ ದಾಸೋಹ ನಿರ್ದೇಶಕರಿಗೆ ಫೋನ್ ಮೂಲಕ ವಿವರಣೆ ನೀಡಿ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಹೆಚ್ಚಿನ ಅನುದಾನ ಹೊಸ ಅಡುಗೆ ಪಾತ್ರೆಗಳು ಹಾಗೂ ಗ್ಯಾಸ್ ಒಲೆಗಳನ್ನು ಪೂರೈಸಬೇಕೆಂದು ಮೇಲಾಧಿಕಾರಿಗಳಿಗೆ ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.