ಕುಮಟಾ: ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸ್ವಾಮೀಜಿಯವರನ್ನು ಶಾಸಕ ದಿನಕರ ಶೆಟ್ಟಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶಾಸಕರ ಜೊತೆ ಮಾತನಾಡಿ, ಗೋಕರ್ಣ ಕೋಟಿತೀರ್ಥದ ಬಳಿ ವಿಶ್ವಕರ್ಮ ಸಮಾಜದ ದೇವಸ್ಥಾನ ನಿರ್ಮಾಣ ಕೆಲಸ ಆಗಬೇಕಿದ್ದು, ಇದು ಸಣ್ಣಸಮಾಜವಾದ ಕಾರಣ ಸರ್ಕಾರದ ನೆರವಿನ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅನುದಾನ ತರಿಸಿಕೊಡುವ ಭರವಸೆ ನೀಡಿದರು.
ಕುಮಟಾ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಗ್ರಾಂ. ಪಂ. ಸದಸ್ಯ ರಮೇಶ ಪ್ರಸಾದ್, ಬಿಜೆಪಿ ಮುಖಂಡ ಮಹೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.