• first
  second
  third
  previous arrow
  next arrow
 • ರೋಟರಿ ಕ್ಲಬ್, ಐಎಂಎ ತಾಲೂಕು ಶಾಖೆ ವತಿಯಿಂದ ರಕ್ತದಾನ ಶಿಬಿರ

  300x250 AD

  ಕುಮಟಾ: ರಕ್ತದಾನದ ಪುಣ್ಯದ ಕಾರ್ಯ ಮತ್ತೊಂದಿಲ್ಲ. ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಡುವಾಗ ಎಷ್ಟೋ ಸಮಯದಲ್ಲಿ ರಕ್ತದ ತುರ್ತು ಅವಶ್ಯಕತೆ ಒದಗಿದಾಗ ಇದರ ಅಗತ್ಯತೆ ಅರಿವಾಗುತ್ತದೆ. ಪ್ರತಿಯೋರ್ವರು ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕೆಂದು ರೋಟರಿ ಕ್ಲಬ್ ಅಧ್ಯಕ್ಷ ಮಾನ್ವೆಲ್ ಸ್ಟೀಪನ್ ರೋಡ್ರಗೀಸ್ ಸಲಹೆ ನೀಡಿದರು.

  ರೋಟರಿ ಕ್ಲಬ್ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತಾಲೂಕು ಶಾಖೆ ವತಿಯಿಂದ ಪಟ್ಟಣದ ಬಳಕೂರು ಕಾಂಪ್ಲೆಕ್ಸ ಡಾ.ವಿ. ಕೆ. ಬಿ. ಬಳ್ಳೂರು ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಯಶ್ವಸಿಯಾಗಿ ಜರುಗಿತು.

  ಇವೆಂಟ್ ಛೇರ್‌ಮನ್ ಡಾ. ಗೌತಮ್ ಬಳ್ಳೂರ್ ಮಾತನಾಡಿ, ಕಳೆದ ಎರಡು ವರ್ಷದಿಂದ ಕೋವಿಡ್ ಅಂಗವಾಗಿ ಹಲವು ಕಾರ್ಯಕ್ರಮ ನಡೆದಿರಲಿಲ್ಲ. ಆರೋಗ್ಯದ ವಿಷಯದಲ್ಲಿ ಆ ದಿನದಲ್ಲಿ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದರು. ಆದರೆ ಎಲ್ಲಾ ಸಮಯದಲ್ಲಿ ಮನುಷ್ಯರಿಗೆ ತುರ್ತು ಅಗತ್ಯವಿರುವುದು ರಕ್ತ ಎನ್ನುವುದನ್ನು ನಾವು ಸದಾ ನೆನಪಿನಲ್ಲಿಡಬೇಕಿದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದ ಕೆಲವೇ ಗಂಟೆಯಲ್ಲಿ ನಮ್ಮ ದೇಹದಲ್ಲಿ ರಕ್ತ ಉತ್ಪತ್ತಿಯಾಗುದರಿಂದ ಯಾವುದೇ ರೀತಿಯಲ್ಲಿಯೂ ಸಮಸ್ಯೆ ಉದ್ಭವಿಸುದಿಲ್ಲ ಎಂದರು.

  300x250 AD

  ರೋಟರಿ ಕ್ಲಬ್ ಸದಸ್ಯರು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸದಸ್ಯರು, ಸಾರ್ವಜನಿಕರು ರಕ್ತದಾನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಮಹೇಶ ಕಲ್ಯಾಣಪುರ್, ರೋಟರಿ ಸದಸ್ಯರಾದ ಡಾ. ಆಶಿಕ್ ಹೆಗ್ಡೆ, ಡಾ. ರಂಗನಾಥ ಪೂಜಾರಿ, ಸುರ್ಯಕಾಂತ ಸಾರಂಗ, ದೀಪಕ ಲೋಪೀಸ್, ವಸಂತ ಕಿಮ್ಮಾನಿಕರ್, ದಿನೇಶ ಕಾಮತ್, ಡಿ.ಜೆ.ನಾಯ್ಕ, ಡಾ. ಕಿರಣ ಬಳ್ಳೂರು, ಇಂಡಿಯನ್ ಮೆಡಿಕಲ್ ಮಹಿಳಾ ಅಸೋಸಿಯೇಶನ್ ಕಾರ್ಯದರ್ಶಿ ಡಾ. ವೈಶಾಲಿ ನಾಯ್ಕ, ಡಾ.ಸುನನ್ಯ ರಾವ್, ಡಾ. ಕಿರಣ ಬಳ್ಳೂರು ಮತ್ತಿತರರು ಹಾಜರಿದ್ದರು.

  Share This
  300x250 AD
  300x250 AD
  300x250 AD
  Back to top