ಶಿರಸಿ: ತಾಲೂಕಿನ ಇಸಳೂರಿನ ಸರ್ಕಾರಿ ಪ್ರಾಢಶಾಲೆಯಲ್ಲಿ ಜೂ. 21ರಂದು ಮುಂಜಾನೆ ಯೋಗದಿನಾಚರಣೆಯನ್ನು ಶಿಸ್ತುಬದ್ಧವಾಗಿ ಆಚರಿಸಲಾಯಿತು. ಸಾಂಪ್ರದಾಯಿಕ ಉದ್ಘಾಟನಾ ಕಾರ್ಯಕ್ರಮವನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾ. ಶಿ. ಇಲಾಖೆಯ ಉಪನಿರ್ದೇಶ ಬಸವರಾಜ, ಮತ್ತು ದೈಹಿಕ ಶಿಕ್ಷಣಾಧಿಕಾರಿ ವಸಂತ ಭಂಡಾರಿ ನೆರವೇರಿಸಿದರು. ನಂತರ ಯೋಗಾಭ್ಯಾಸವು ಯೋಗಪಟು ದಿವಾಕರ ಮರಾಠೆ ಇವರಿಂದ ಆರಂಭಗೊಂಡಿತು. ರೋಗ ನಿವಾರಕ ಆಸನಗಳು, ಮನಸ್ಸಿನ ನಿಯಂತ್ರಕ ಪ್ರಾಣಾಯಾಮ ತಂಡಗಳ ಮೂಲಕ ಅಭ್ಯಾಸ ಮಾಡಿಸಲಾಯಿತು. ಜಿಲ್ಲಾ ಇಲಾಖಾ ಅಧಿಕಾರಿಗಳಿಂದ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರಿಂದ ಯೋಗ ಲಾಂಛನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮಾರು ಒಂದು ಗಂಟೆ ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಯೋಗಾಭ್ಯಾಸದಲ್ಲಿ ನಿರತರಾಗಿದ್ದರು. ದಿವಾಕರ ಮರಾಠೆ ನೇತೃತ್ವದಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ ಆಚರಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
