ಶಿರಸಿ:ಬಿಸಲಕೊಪ್ಪದ ಸೂರ್ಯ ನಾರಾಯಣ ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆ 2 ಹಂತದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಕಿಶೋರ್ ವರ್ಣೆಕರ ನೇತೃತ್ವದಲ್ಲಿ ಸಾರ್ವಜನಿಕರಿಗೆ, ತದನಂತರ ದೈಹಿಕ ಶಿಕ್ಷಕ ಸತೀಶ್ ಹೆಗಡೆ ನೇತೃತ್ವದಲ್ಲಿ ಮಕ್ಕಳಿಗೆ ಯೋಗ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ಸೂರ್ಯನಮಸ್ಕಾರ ನಂತರ ಮಹತ್ವ ತಿಳಿಯುತ್ತ ವಿವಿಧ ಆಸನ, ಪ್ರಾಣಾಯಾಮಗಳನ್ನು ಮಕ್ಕಳು ಮಾಡಿದರು. ಮುಖ್ಯೋಪಾಧ್ಯಾಯರಾದ ಗಣೇಶ ಭಟ್ ವಾನಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ರೂಢಿಸಿ ಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.
ಯೋಗ ಒಂದೇ ದಿನಕ್ಕೆ ಸೀಮಿತವಾಗದೆ ನಿತ್ಯ ರೂಢಿಸಿಕೊಳ್ಳಿ;ಗಣೇಶ್ ಭಟ್
