• Slide
  Slide
  Slide
  previous arrow
  next arrow
 • ದ್ವಿತೀಯ ಪಿಯು ಪರೀಕ್ಷೆ; ಅರ್ಜುನ ಕಾಲೇಜಿನ ಈರ್ವರು ರಾಜ್ಯಕ್ಕೆ ಪ್ರಥಮ

  300x250 AD

  euk ವಿಶೇಷ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ ಸೈನ್ಸ್ ಪಿಯು ಕಾಲೇಜ್ ನ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

  ಕಾಲೇನಿಂದ ಒಟ್ಟು49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಪ್ರಣೀತ್ ಕಡ್ಲೆ ಹಾಗೂ ಎಚ್.ಎಮ್.ಶ್ರೀಮುಖ ಇಬ್ಬರೂ 600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ.

  ಹಾಗೂ 15 ವಿದ್ಯಾರ್ಥಿಗಳು 95%ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿದ್ದು ,ಸುದಿತಿ ಕಾಮತ್ 599(99.84%) ಅನಿತಾ ಬಂಧಿವಾಡ 597(99.50%) ಹರ್ಷಿತ್ ರೇಶ್ಮಿ 590(98.33%) ಅನೀಶ್ ವರ್ತಿ 589(98.17%) ವಿಶ್ವನಾಥ ಎಚ್.589(98.17%) ಶಶಾಂಕ್ ಡಿಕೆ 587(97.83%) ಸುದೀಪ್ ನಾಯ್ಕ್ 586(97.67%) ಇಶಾ ಭಟ್ 586(97.67%) ಪ್ರತೀಕ್ ಭಟ್ 585(97.50%)  ಸಂಜನಾ ಟಿಕಾರೆ 583(97.17%) ಅಭಿಜಿತ್ ನಾಯಕ್ 583(97.17%) ಸಾಗರಿಕಾ ಕೆ 575(95.83%) ರಮೇಶ ಗಲಿ 571(95.17%) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಹಾಗು 23 ವಿದ್ಯಾರ್ಥಿಗಳು 90% ಗಿಂತ ಹೆಚ್ಚಿನ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

  300x250 AD

  ಒಟ್ಟೂ 33 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, ಉಳಿದ 16 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top