ಸಿದ್ದಾಪುರ; ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ 8 ನೇಯ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಕೆ.ಟಿ ನಾಯ್ಕ ನೆರವೇರಿಸಿದರು. ನಂತರ ಮಾತನಾಡಿದ ಅವರು ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದ್ದು ಇದು ವಿಶಿಷ್ಟವಾಗಿದೆ ಎಂದರು. ನಿಯಮಿತವಾಗಿ ಯೋಗ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಯೋಗ ಪ್ರಾತ್ಯಕ್ಷಿಕೆದಾರರಾದ ಶಂಕರ ಹೆಗಡೆಯವರು ಯೋಗದಿನದ ಹಿನ್ನಲೆ ಆರೋಗ್ಯಕ್ಕೆ ಯೋಗದಿಂದಾಗುವ ಲಾಭ ಹಾಗೂ ಪಾಲಿಸಬೇಕಾದ ಆಹಾರ ಕ್ರಮದ ಬಗೆಗೆ ಉಪನ್ಯಾಸ ನೀಡಿದರು. ಇನ್ನೊರ್ವ ಮುಖ್ಯ ಅತಿಥಿಗಳಾದ ಆರೋಗ್ಯ ಇಲಾಖೆಯ ಅಧಿಕಾರಿ ಸುಭಾಷ್ ಭಜಂತ್ರಿ ಯೋಗ ಮತ್ತು ಆರೋಗ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗಪತಿ ಭಟ್ ಮಿಳಗಾರ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಜಿ.ವಿ ಹೆಗಡೆ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಕು. ಚೈತ್ರಾ ಗೌಡ ಕಾರ್ಯಕ್ರಮ ನಿರ್ವಹಿಸಿದರೆ, ಕು. ಹೇಮಂತ್ ಗೌಡ ಸ್ವಾಗತ ಹಾಗೂ ರೋಹಿತ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಮೈತ್ರಿ ಹೆಗಡೆ ವಂದನಾರ್ಪಣೆ ಮಾಡಿದರು.
ಶಂಕರನಾರಾಯಣ ಹೆಗಡೆ ಕಿಬ್ಬಳ್ಳಿ ಯೋಗಾಸನ ಪ್ರಾತ್ಯಕ್ಷಿಕೆ ಜೊತೆ ಮಕ್ಕಳು ಯೋಗಾಸನ ಮಾಡಿ ಕಾರ್ಯಕ್ರಮ ಅರ್ಥಪೂರ್ಣವಾಗಿಸಿದರು.
ಕಿಬ್ಬಳ್ಳಿ ಹೈಸ್ಕೂಲ್ ನಲ್ಲಿ ಯೋಗ ದಿನಾಚರಣೆ ಯಶಸ್ವಿ
