ಶಿರಸಿ:ತಾಲೂಕಿನ ಔಡಾಳ ಶಾಲೆಯಲ್ಲಿ 8ನೇ ವಿಶ್ವಯೋಗ ದಿನಾಚರಣೆಯನ್ನು ಬೆಳಿಗ್ಗೆ 7 ಗಂಟೆಗೆ ಸಭಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಧರ ನಾ. ಹೆಗಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಔಢಾಳ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ನಾಯ್ಕ,ಗ್ರಾ.ಪಂ. ಸೋಂದಾ ಸದಸ್ಯರು ನಾಗರಾಜ ಎನ್. ಪೂಜಾರಿ,ಎಸ್.ಡಿ.ಎಂ.ಸಿ ಸದಸ್ಯರು ವಿನಾಯಕ ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪದೋನ್ನತಿ ಮುಖ್ಯ ಶಿಕ್ಷಕರಾದ ಜಿ,ಕೆ.ಭಟ್ಟ ವೇದಿಕೆಯ ಮೇಲೆ ಉಪಸ್ಥಿತರಿರುವ ಹಾಗೂ ಸಮಸ್ತರನ್ನೂ ಸ್ವಾಗತಿಸಿದರೆ ಸಹ ಶಿಕ್ಷಕರಾದ ಕೆ.ಪಿ. ಜೋಶಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ವೀಣಾ ಭಟ್ಟ ಸಹಶಿಕ್ಷಕಿ ವಂದನಾರ್ಪಣೆ ಮಾಡಿದರೆ, ಅತಿಥಿ ಶಿಕ್ಷಕಿಯರಾದ ಶ್ರೀಮತಿ ತನುಜಾ ಹೆಗಡೆ ಸಹಕರಿಸಿದರು. ಯೋಗ ಶಿಕ್ಷಕರಾದ ಸತೀಶ ನಾಯ್ಕ ಮಕ್ಕಳಿಗೆ ಯೋಗ ತರಬೇತಿ ನಡೆಸಿಕೊಟ್ಟರು.
ಸಂಭ್ರಮದಿಂದ ಯೋಗ ದಿನ ಆಚರಿಸಿದ ಪುಟಾಣಿಗಳು
