ಶಿರಸಿ:ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಬನ್ನಿ ಪುನ: ಶಾಲೆಗೆ ಹೋಗೋಣ’ ಕಾರ್ಯಕ್ರಮದಡಿ ಶ್ರೀ ಟ್ರಸ್ಟ್ ನ ಅಮೋದ ಶಿರ್ಸಿಕರ್ ಉಚಿತ ಶಾಲಾ ಬ್ಯಾಗ್ ವಿತರಿಸಿದರು.
ನಂತರ ಮಾತನಾಡಿದ ಅವರು ಶಾಲೆ, ಗುರುಗಳು ಹಾಗೂ ಸಮಾಜದ ಋಣವನ್ನು ಮರೆಯಬಾರದೆಂದು ಹಿತ ನುಡಿದರು.ಮುಖ್ಯಾಧ್ಯಾಪಕ ರಾಘವ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷ ಎಮ್.ಎನ್.ಭಟ್ಟ ಅರೇಕಟ್ಟಾ ಉಪಸ್ಥಿತರಿದ್ದರು. ಕೃಷ್ಣ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.