ಶಿರಸಿ: ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ವಿಶ್ವಯೋಗದಿನವನ್ನು ಜೂ.21 ರಂದು ಆಚರಿಸಲಾಯಿತು. ಮುಂಜಾನೆ 7 ಗಂಟೆಯಿಂದ 8.30ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು. ಪಾಲಕರು ಹಾಗೂ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ‘ಸೂರ್ಯನಮಸ್ಕಾರ’, ಯೋಗಾಸನವನ್ನು ಮಾಡಿದರು. ಕೃಷ್ಣಮೂರ್ತಿ ಭಟ್ಟ ಸಹಶಿಕ್ಷಕರು ಯೋಗ, ಯೋಗಾಭ್ಯಾಸದ ಮಹತ್ವದ ಕುರಿತು ತಿಳಿಸಿದರು.
ವಾನಳ್ಳಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ
