ಶಿರಸಿ:ವಿಶ್ವ ಯೋಗ ದಿನದ ಅಂಗವಾಗಿ ಎಂ.ಇ.ಎಸ್ ನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್ ಸಿ ಸಿ,ಎನ್ ಎಸ್ ಎಸ್ ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ ವಿಭಾಗಗಳ ಸಹಯೋಗದೊಂದಿಗೆ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ ಮಂಜುನಾಥ ಹೆಗಡೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿ, ಯೋಗಾಭ್ಯಾಸ ಮಾಡುವದರಿಂದ ಆಗುವ ಲಾಭದ ಕುರಿತು ತಿಳಿಸಿದರು ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಉಪಸ್ಥಿತರಿದ್ದರು.
ಎಂ.ಎಂ. ಮಹಾವಿದ್ಯಾಲಯದಲ್ಲಿ ಯೋಗಾಭ್ಯಾಸ
