ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಜೂ.24 ಹಾಗೂ 25ಕ್ಕೆ ತರಕಾರಿ ಬೀಜದ ಸಂತೆ ಏರ್ಪಡಿಸಲಾಗಿದೆ.
ನಗರದ ಎ.ಪಿ.ಎಂ.ಸಿ ಯಾರ್ಡಿನ ಪಿ.ಎಲ್.ಡಿ ಬಾಂಕ್ ಕಟ್ಟಡದಲ್ಲಿರುವ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ತರಕಾರಿ ಬೀಜದ ಸಂತೆ ನಡೆಯಲಿದ್ದು ಸ್ಥಳೀಯ ಹಾಗೂ ದೇಸಿ ತಳಿಯ ತರಕಾರಿ ಬೀಜಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.