ಶಿರಸಿ: ಪತಂಜಲಿ ಯೋಗ ಸಮಿತಿ & ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ್ ಪಂಚಾಯತ,ಪತಂಜಲಿ ಮಹಿಳಾ ಯೋಗ ಸಮಿತಿ, ಸಂಘಟನೆಯ ತಾಲೂಕಾ ಸಮಿತಿ ಹಾಗೂ ಸಂಘಟನೆಯ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಜೂನ್ 21 ರಂದು 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಹಲವು ಸ್ಥಳಗಳಲ್ಲಿ ಬೆಳಿಗ್ಗೆ 5-45 ರಿಂದ 7-00 ರವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸ್ಥಳಗಳ ವಿವರಗಳು ಇಂತಿವೆ.
- ಶಿರಸಿ- ಯೋಗಮಂದಿರ, ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಜಯಂತಿ ಹೈಸ್ಕೂಲ ಸಭಾಭವನ, ಬನವಾಸಿ,
- ಸಿದ್ದಾಪುರ- ಶಂಕರಮಠ,
- ಯಲ್ಲಾಪುರ- ಅಡಿಕೆ ಭವನ, ಎ.ಪಿ.ಎಮ್.ಸಿ ಯಾರ್ಡ್
- ಮುಂಡಗೋಡ- ಸರಕಾರಿ ಆಯುರ್ವೇದ ಆಸ್ಪತ್ರೆಯ ಯೋಗಭವನ
- ಹಳಿಯಾಳ- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯ, ಶಿವಾಜಿ ಗಲ್ಲಿ
- ದಾಂಡೇಲಿ- ವೀರಭದ್ರ ದೇವಸ್ಥಾನ ಸಮುದಾಯ ಭವನ
- ಕಾರವಾರ- ಪೊಲೀಸ್ ಕಲ್ಯಾಣ ಮಂಟಪ, ಸರೀಚಾ ಹಾಲ್, ಸದಾಶಿವಗಡ
- ಅಂಕೋಲಾ- ಅರ್ಬನ್ ಬ್ಯಾಂಕ್ ಸಭಾಭವನ – ಬೆಳಿಗ್ಗೆ ಸತ್ಯಾಗ್ರಹ ಸ್ಮಾರಕ ಹಾಲ್ – ಸಂಜೆ
- ಕುಮಟಾ- ಗಿಬ್ ಹೈಸ್ಕೂಲ್ ಸಭಾಭವನ
- ಗೋಕರ್ಣ- ಕೆನರಾ ಎಕ್ಸಲನ್ನಿ ಪಿ.ಯು.ಕಾಲೇಜ್, ಗೋರೆ
- ಹೊನ್ನಾವರ- ಶಿವಗುರು ಸಭಾಭವನ, ಪತಂಜಲಿ ಚಿಕಿತ್ಸಾಲಯದ ಮೇಲೆ
- ಭಟ್ಕಳ- ಮುರುಡೇಶ್ವರ ದೇವಸ್ಥಾನ
ಈ ಮೇಲಿನ ಸ್ಥಳಗಳಲ್ಲಿ ನಡೆಯಲಿದ್ದು ಯೋಗ ಬಂಧುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪತಂಜಲಿ ಎಲ್ಲ ಸಂಘಟನೆಗಳ ಪರವಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.