ಯಲ್ಲಾಪುರ:ಯಾರೂ ಶಿಕ್ಷಣದಿಂದ ಹೊರಗಿಳಿಯಬಾರದು.ಶಿಕ್ಷಣವೇ ಬದುಕಾಗಿದ್ದು ಇವತ್ತು ಶಿಕ್ಷಣವನ್ನು ಎಲ್ಲರೂ ಪ್ರೋತ್ಸಾಹಿಸುತ್ತಿದ್ದಾರೆ ಎಲ್ಲರೂ ಶಿಕ್ಷಣ ಪಡೆಯುವಂತಾಗಲು ಸಮಾಜದಲ್ಲಿ ಎಲ್ಲರ ಜವಾಬ್ದಾರಿಯೂ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.
ತಾಲೂಕಿನ ಹುತ್ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜನಪ್ರಿಯ ಟ್ರಸ್ಟ್ ವತಿಯಿಂದ ನಡೆದ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಣದ ವಿಷಯದಲ್ಲಿ ನಾವು ನಮ್ಮ ಕೊಡುಗೆಯನ್ನು ನೀಡುವುದರಿಂದ ಮುಂದೊಂದು ದಿನ ವ್ಯಕ್ತಿಯೊಬ್ಬ ಬಲಿಷ್ಠವಾಗಿ ಬೆಳೆಯುತ್ತಾನೆ.ಸಮಾಜವೂ ಗಟ್ಟಿಯಾಗುತ್ತದೆ ಎಂದ ಅವರು ಜನಪ್ರಿಯ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶ್ರೀರಾಮ ಹೆಗಡೆ,ಮಾತನಾಡಿ ಶಿಕ್ಷಣದ ಬಗ್ಗೆ ತಮಗಿರುವ ಕಾಳಜಿಯನ್ನು ಸಹಾಯ ಮಾಡುವ ಮೂಲಕ ಟ್ರಸ್ಟ್ ವ್ಯಕ್ತಪಡಿಸಿದೆ ಎಂದರು.
ನೋಟ್ ಬುಕ್ ವಿತರಿಸಿದ ಜನಪ್ರಿಯ ಟ್ರಸ್ಟ್ ಮುಖ್ಯಸ್ಥ ಮಹೇಶ ಭಟ್ಟ ಕಂಚನಳ್ಳಿ ಮಾತನಾಡಿ ಟ್ರಸ್ಟ್ ಪ್ರತಿವರ್ಷ ಕರ್ನಾಟಕ ಮತ್ತು ತಮೀಳನಾಡುಗಳಲ್ಲಿ ಸೇರಿ ಸಾವಿರ ವಿದ್ಯಾರ್ಥಿಗಳಿಗೆ ಈ ಸವಲತ್ತು ನೀಡುತ್ತಿದೆ ಎಂದ ಅವರು ಮಕ್ಕಳುಓದುವ ಹವ್ಯಾಸ ಬೆಳೆಸಲು ಗ್ರಂಥಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದರು. ದೈಹಿಕಪರಿವೀಕ್ಷಕ ವಿನೋದ ನಾಯ್ಕ್, ಗ್ರಾ.ಪಂ ಮಾಜಿ ಅಧ್ಯಕ್ಷ. ಅಪ್ಪು ಆಚಾರಿ ಉಪಸ್ಥಿತರಿದ್ದರು.ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ಸ್ವಾಗತಿಸಿ ವಂದಿಸಿದರು.