ಯಲ್ಲಾಪುರ; ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆಯನ್ನು ನಡೆಸುವ ಮೂಲಕ ಸೋಮವಾರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂತತ್ತಿನ ಆಯ್ಕೆ ನಡೆಯಿತು.
ಚುನಾವಣೆ ಪ್ರಕ್ರಿಯೆಗಳಾದ ಅಧಿಸೂಚನೆ,ನಾಮಪತ್ರ,ಪ್ರಚಾರ,ನೀತಿ ಸಂಹಿತೆ,ಇವಿಎಂ ಆ್ಯಪ್ ಮೂಲಕ ಮತದಾನ ನಡೆಸಿ ಚುನಾವಣೆಯ ಕಾರ್ಯವಿಧಾನಗಳ ಪ್ರಾಯೋಗಿಕ ಅನುಷ್ಠಾನ ನಡೆಯಿತು.
ಚುನಾವಣಾಧಿಕಾರಿಗಳಾಗಿ ಫಾ ರೇಮಂಡ್ ಫರ್ನಾಂಡೀಸ್ ಶಿಕ್ಷಕ ಚಂದ್ರಶೇಖರ ಕಾರ್ಯ ನಿರ್ವಹಿಸಿದರು.
ಶಿಕ್ಷಕರಾದ ಜಗದೀಶ ಭಟ್,ಎಂ.ರಾಜಶೇಖರ,ವೆಂಕಟ್ರಮಣ ಭಟ್ಟ,ಅಂತೋನಿ ರೊಡ್ರಿಗಸ್,ಜ್ಯೋತಿ,ಮೇಘ,ಪ್ಲಿಂಕಿ,ಅರ್ಚನಾ ಕಾರ್ಯ ನಿರ್ವಹಿಸಿದರು.
ಪ್ರಜಾಪ್ರಭುತ್ವ ಮಾದರಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಸತ್ ಆಯ್ಕೆ
