ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಮಠದಲ್ಲಿ ಜೂ.21ರಂದು ಬೆಳಿಗ್ಗೆ 6.30ಕ್ಕೆ ಎಂಟನೇ ಅಂತರಾಷ್ಟ್ರೀಯ ಯೋಗ ದಿನದ ಹಿನ್ನಲೆಯಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ.
ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ನಡೆಸಲಾಗುತ್ತಿದೆ. ಯೋಗ ದಿನದ ಯೋಗಾಭ್ಯಾಸವನ್ನು ಶ್ರೀಮಠದಲ್ಲಿ ಬೆಳಿಗ್ಗೆ 6.30ಕ್ಕೆ ಸುಧರ್ಮಾ ಸಭಾಂಗಣದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಉದ್ಘಾಟಿಸಲಿದ್ದು ಬಳಿಕ ಸ್ವತಃ ಶ್ರೀಗಳು ಯೋಗ ಮಾಡಲಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ, ಡಾ. ಕೆ.ಸುಧಾಕರ ಇತರರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 6.30 ರಿಂದ 7 ಉದ್ಘಾಟನೆ, 7 ರಿಂದ 8 ಸಾಮೂಹಿಕ ಯೋಗಾಸನ, 8ಕ್ಕೆ ಮಾನವೀಯತೆಗಾಗಿ ಯೋಗ ಕುರಿತು ಕಿರು ಸಂದೇಶ, 9.15ಕ್ಕೆ ಯೋಗಾಸನ ಸ್ಪರ್ಧೆ,11.30ರಿಂದ ಸಮಾರೋಪ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
21ಕ್ಕೆ ಸ್ವರ್ಣವಲ್ಲೀಯಲ್ಲಿ ಯೋಗ ದಿನ
