ಶಿರಸಿ; ವಿಶ್ವ ಸಂಗೀತ ದಿನಾಚರಣೆಯ ನಿಮಿತ್ತ ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದೊಡನೆ ವಿಶ್ವಸಂಗೀತ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂಜಾನೆ 10 ಘಂಟೆಗೆ “ಉದಯರಾಗ ಕಾರ‍್ಯಕ್ರಮ” ಹಾಗೂ ಸಂಗೀತ ವಾದ್ಯಗಳ ಪ್ರದರ್ಶನ ನಡೆಯಲಿದೆ.
ಮೈಸೂರಿನ ಸಂಗೀತ ವಿಶ್ವ ವಿದ್ಯಾಲಯದ ಉದಯೋನ್ಮುಖ ಗಾಯಕಿ ಶ್ರೀರಂಜನಿ ಇವರ ಗಾಯನ ಕಾರ‍್ಯಕ್ರಮವನ್ನು ಏರ್ಪಡಿಸಲಾಗಿದೆ. ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಮ್ ಹೆಗಡೆ ಮುಳಖಂಡ ಕಾರ‍್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಆಗಮಿಸುವರು. ಉಪಸಮಿತಿಯ ಸದಸ್ಯರಾದ ಲೋಕೇಶ ಹೆಗಡೆ ಹಾಗೂ ಎಂ.ಇ.ಎಸ್.ಪಿಯು ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರ ಹೆಗಡೆಯವರು ಉಪಸ್ಥಿತರಿರುವರು. ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ|| ಟಿ.ಎಸ್ ಹಳೇಮನಿ ಅಧ್ಯಕ್ಷತೆ ವಹಿಸುವರು. ಸಂಗೀತ ವಿಭಾಗದ ಮುಖ್ಯಸ್ಥ ಡಾ|| ಕೃಷ್ಣಮೂರ್ತಿ ಭಟ್ ಉಪಸ್ಥಿತರಿರುವರು.