• Slide
  Slide
  Slide
  previous arrow
  next arrow
 • ಸರಕುಳಿ ಶ್ರೀ ಜಗದಂಬಾ ಪ್ರೌಢಶಾಲೆಯ 65ನೇ ಸಂಸ್ಥಾಪನಾ ದಿನಾಚರಣೆ

  300x250 AD

  ಸಿದ್ದಾಪುರ: ತಾಲೂಕಿನ ಸರಕುಳಿ ಗ್ರಾಮದ ಸರಕುಳಿ ಶಿಕ್ಷಣ ಸಮಿತಿಯ ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿ ಇದರ 65ನೇ ಸಂಸ್ಥಾಪನಾ ದಿನಾಚರಣೆಯನ್ನು ಜೂ.19ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
  ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದ ಸಮಯದಲ್ಲಿ 1957ರಲ್ಲಿ ದಿ| ಸುಬ್ರಾಯ ಹೆಗಡೆ, ತ್ಯಾರಗಲ್ ಇವರ ಅಧ್ಯಕ್ಷತೆಯಲ್ಲಿ ದಿ| ರಾಮಚಂದ್ರ ಭಟ್ಟ, ತಟ್ಟಿಕೈ ಇವರು ಕಾರ್ಯದರ್ಶಿಗಳಾಗಿ 09 ಸದಸ್ಯರನ್ನೊಳಗೊಂಡ ಸರಕುಳಿ ಶಿಕ್ಷಣ ಸಮಿತಿಯನ್ನು ಸ್ಥಾಪಿಸಿ, ಪ್ರೌಢಶಾಲೆ ಸ್ಥಾಪನೆಗೆ ಪಣತೊಟ್ಟರು. ಅವಿರತ ಪ್ರಯತ್ನದ ಫಲವಾಗಿ ಜೂನ್ 19, 1958ರಂದು ಪ್ರೌಢಶಾಲೆಯನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ 1961ರವರೆಗೆ ಶಿರಸಿಯ ಪ್ರೊಗ್ರೆಸ್ಸಿವ್ ಸಂಸ್ಥೆಯ ಅಡಿಯಲ್ಲಿ ಶಾಲೆಯನ್ನು ನಡೆಸಲಾಯಿತು. ನಂತರದಲ್ಲಿ ಸ್ಥಳೀಯರ ಸತತ ಪರಿಶ್ರಮದಿಂದ ಸ್ವತಂತ್ರವಾಗಿ ಶಾಲೆಯನ್ನು ನಡೆಸಲಾಯಿತು. 1958ರಿಂದ ಇಂದಿನವರೆಗೆ ಸುಮಾರು 4200ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದು, ದೇಶ ವಿದೇಶಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡು, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ.
  ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಕೃಷ್ಣಮೂರ್ತಿ ಎಚ್ ಎಸ್, ಸರಕುಳಿ ಶಿಕ್ಷಣ ಸಮಿತಿಯ ಈಗಿನ ಕಾರ್ಯದರ್ಶಿಗಳಾದ ನರಹರಿ ಹೆಗಡೆ, ಸದಸ್ಯರಾದ ಪ್ರಭಾಕರ ಭಟ್ಟ, ಪ್ರೌಢಶಾಲೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಜಿ.ಆರ್.ಭಾಗ್ವತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top