ದಾಂಡೇಲಿ: ನಗರದಲ್ಲಿ ದಿನದಿಂದ ಏರುತ್ತಿರುವ ಬಿಡಾಡಿ ದನಕರುಗಳಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದ್ದು, ಸಂಬಂಧಪಟ್ಟವರು ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿರುವುದೇ ಈ ಸಮಸ್ಯೆ ನಿಯಂತ್ರಣವಾಗದಿರಲು ಕಾರಣ ಎನ್ನಲಾಗಿದೆ.
ನಗರದ ಸುಭಾಸನಗರದ ಜನವಸತಿ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಿಡಾಡಿ ದನ ಕರುಗಳಿದ್ದು, ಅವೆಲ್ಲವುಗಳು ಕಾಲುಬಾಯಿ ರೋಗದಿಂದ ಬಳಲುತ್ತಿವೆ. ಕಾಲುಬಾಯಿ ರೋಗದಿಂದ ಬಳಲುತ್ತಿರುವ ಬಿಡಾಡಿ ದನಕರುಗಳು ಗಬ್ಬು ವಾಸನೆ ಬರುತ್ತಿದ್ದು, ಸ್ಥಳೀಯ ಜನರಿಗೆ ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ.
ಬಿಡಾಡಿ ದನಕರುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರಾದ ಲಕ್ಷ್ಮಣ ಜಾಧವ ಅವರು ಆಗ್ರಹಿಸಿದ್ದಾರೆ.