• Slide
    Slide
    Slide
    previous arrow
    next arrow
  • ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ಸಮಾಜ ಸದಾ ಕಾಳಜಿ ವಹಿಸಬೇಕು; ಆರ್.ವಿ.ದೇಶಪಾಂಡೆ

    300x250 AD

    ಶಿರಸಿ; ಅಜಿತ ಮನೋಚೇತನ ಸಂಸ್ಥೆಯ ವಿಕಾಸ ಶಾಲಾ ವಿಶೇಷ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಚಾಲನೆ ನೀಡಿ ಸಸಿ ನೆಟ್ಟು ಶುಭ ಹಾರೈಸಿದರು. ಅಜಿತ ಮನೋಚೇತನ ಸಂಸ್ಥೆ ಉತ್ತರಕನ್ನಡಜಿಲ್ಲೆಯ ಹೆಮ್ಮೆಯ ಸಂಸ್ಥೆ ಎಂದು ಶ್ಲಾಘಿಸಿದರು. ಮಾನವರಾಗಿ ಹುಟ್ಟಿದಮೇಲೆ ಮಾನವರಾಗಿ ಬದುಕಬೇಕು. ವಿಕಲಚೇತನ ಮಕ್ಕಳ ಸೇವೆ ಮಾಡುವ ಮೂಲಕ ದೇವರ ಸೇವೆ ಮಾಡುತ್ತಿದ್ದೀರಿ. ಸಂಸ್ಥೆಗೆ ನನ್ನ ಸಹಾಯ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.
    ಇದೇ ಸಂದರ್ಭದಲ್ಲಿ ದೀವಗಿ ಟಾರ್ಕ್ ಟ್ರಾನ್ಸ್ಪರ್ ಸಿಸ್ಟಮ್ ಪುಣೆಯವರು ದೇಣಿಗೆ ನೀಡಿದ ನೂತನ ಶಾಲಾ ಬಸ್‌ಗೆ ಮಕ್ಕಳು, ಪಾಲಕರು, ಶಿಕ್ಷಕರು, ಪದಾಧಿಕಾರಿಗಾಳು ಆರತಿಯೊಂದಿಗೆ ಪುಷ್ಪಾರ್ಚನೆ ಮಾಡಿದರು.
    ಸ್ಪೆಶಲ್‌ ಒಲಿಂಪಿಕ್‌ ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳಲಿರುವ ವಿಕಾಸ ಶಾಲಾ ವಿದ್ಯಾರ್ಥಿಯಾದ ಸಾಲ್ವಿನ್ ಎಂಬ ಹುಡುಗನಿಗೆ ಆರ್. ವಿ. ದೇಶಪಾಂಡೆ ಹಾಗೂ ಸಂಸ್ಥೆಯವರು ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ಹಣ್ಣು, ಸಮವಸ್ತ್ರ ಹಾಗೂ ಉಚಿತ ಔಷಧ ಕಿಟ್ ವಿತರಿಸಲಾಯಿತು.
    ಈ ಸಂದರ್ಭದಲ್ಲಿ ಸಂಸ್ಥೆಯಅಧ್ಯಕ್ಷರಾದ ಸುಧೀರ ಭಟ್, ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಪ್ರೊ. ರವಿ ನಾಯಕ C/o ಉದಯ ಸ್ವಾದಿ, ಅರ್ಬನ್ ಬ್ಯಾಂಕ್ ನ ಜಯದೇವ ನಿಲೇಕಣಿ, ರೋಟರಿ ಆಸ್ಪತ್ರೆಯ ನಿತಿನ ಕಾಸರಕೋಡ, ದೀವಗಿ ಇಂಡಸ್ಟ್ರಿಯ ಮಂಜುನಾಥ ಮತ್ತು ತಳವಾರ ಮುಂತಾದವರು ಉಪಸ್ಥಿತರಿದ್ದರು
    ಶಿರಸಿಯ ಬಟ್ಟೆ ವ್ಯಾಪಾರಿಗಳಾದ ಶಂಕರ ಮಾಳವದೆಯವರು ಇದೇ ಸಂದರ್ಭದಲ್ಲಿ ಗಾಳಿ ಪಂಖ ಹಾಗೂ ಇತರ ಉಪಕರಣಗಳನ್ನು ಸಂಸ್ಥೆಗೆ ನೀಡಿದರು. ಶ್ರೀಮತಿ ನರ್ಮದಾ ಮುಖ್ಯ ಶಿಕ್ಷಕಿ ಸ್ವಾಗತಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top