• Slide
    Slide
    Slide
    previous arrow
    next arrow
  • ಲಯನ್ಸ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಯೋಗ ತರಬೇತಿ

    300x250 AD

    ಶಿರಸಿ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಲಯನ್ಸ್ ಶಾಲೆಯ 9 ಮತ್ತು 10 ನೇ ವರ್ಗದ ವಿದ್ಯಾರ್ಥಿಗಳಿಗೆ ಲಯನ್ಸ್ ಸಭಾಭವನದಲ್ಲಿ ನಾಡಿನ ಹಿರಿಯ ಯೋಗ ತರಬೇತುದಾರರಾದ ಕರ್ನಾಟಕ ಸರಕಾರದ ಯೋಗ ಪಠ್ಯ ಲೇಖಕರು, ನಿವೃತ್ತ ವರಿಷ್ಠ ವಿದ್ಯಾಧಿಕಾರಿಗಳಾದ, ಹಿಮಾಲಯ ಪರಂಪರೆಯ ಯೋಗ ಸಾಧಕರಾದ ಯೋಗಾಚಾರ್ಯ ಯೋಗ ಶಿಕ್ಷಕರಾದ ಶಂಕರನಾರಾಯಣ ಶಾಸ್ತ್ರಿಗಳು , ಜೂ.18 ಶನಿವಾರದಂದು ಯೋಗ ತರಬೇತಿ ನಡೆಸಿದರು.
    ಈ ಸಂದರ್ಭದಲ್ಲಿ ವಿಷಯ ಗ್ರಹಿಕೆ, ಅದರ ಅನ್ವಯೀಕರಣ ಮತ್ತು ಉತ್ತಮ ಫಲಿತಾಂಶಕ್ಕಾಗಿ ಯಾವ ರೀತಿಯಲ್ಲಿ ಯೋಗಾಭ್ಯಾಸ ಸಹಾಯಕಾರಿ ಎಂಬುದನ್ನು ತಿಳಿಸಿಕೊಡುತ್ತಾ ಭಸ್ತ್ರಿಕ, ಮುಖಧೌತಿ, ಕಪಾಲಭಾತಿ, ಅನುಲೋಮ, ಭ್ರಾಮರಿ ಎಂಬ ಯೋಗಾಸಗಳನ್ನು ಸರಳವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತ ಮುದ್ರೆಗಳ ಜೊತೆಗೆ ಅವುಗಳ ಉಪಯೋಗದ ಮತ್ತು ಪ್ರಾಮುಖ್ಯತೆಯ ಬಗೆಗೆ ಸವಿವರವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು. ದಿನನಿತ್ಯದ ದಿನಚರಿಯ ಭಾಗವಾಗಿ ವಿದ್ಯಾಭ್ಯಾಸದ ಸಾಧನೆಯ ಭಾಗವಾಗಿ ಯೋಗಾಭ್ಯಾಸ ಕ್ರಮವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳ ಸಾಧನೆಗೆ ಏಕಾಗ್ರತೆ ಮುಖ್ಯ.ಆರೋಗ್ಯ ರಕ್ಷಣೆಗಾಗಿ ಸಾಕಷ್ಟು ಉತ್ತಮ ಸಲಹೆ ನೀಡಿದರು. ತಾವು ಮಕ್ಕಳಿಗೆ ನಿರ್ದೇಶಿಸಿದ ಪ್ರತಿಯೊಂದು ಯೋಗಾಸನಗಳಿಂದ ಯಾವ ಯಾವ ರೀತಿಯ ಪ್ರಯೋಜನ ಶರೀರಕ್ಕೆ ಸಿಗಬಹುದೆಂಬುದನ್ನು ಶಂಕರನಾರಾಯಣ ಶಾಸ್ತ್ರಿಗಳು ಮನಮುಟ್ಟುವಂತೆ ಮಕ್ಕಳಿಗೆ ತಿಳಿಸಿ ಹೇಳಿದರು.
    ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ ಅಭ್ಯಾಗತರನ್ನು ಸ್ವಾಗತಿಸಿದರು. ಯೋಗ ಮಾರ್ಗದರ್ಶನ ಪುಸ್ತಕಗಳನ್ನು ಬರೆದಂತಹ, ಯೋಗ ಶಿಕ್ಷಕರು,¸ಸಾಧಕರಾದ ಶಂಕರನಾರಾಯಣ ಶಾಸ್ತ್ರಿಗಳ ಯೋಗ ತರಬೇತಿ ಕಾರ‍್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು,ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಯಶಸ್ಸು ಪಡೆಯಲೆಂದು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಗ ಪೆಡರೇಷನ್ ಕಾರ್ಯದರ್ಶಿಗಳು, ಲಯನ್ಸ ಶಿಕ್ಷಣ ಸಂಸ್ಥೆಯ ಸದಸ್ಯರಾದ ಲಯನ್ ಶ್ರೀಕಾಂತ್ ಹೆಗಡೆ ಇವರು ಹಾರೈಸಿದರು. ಲಯನ್ಸ್ ಶಾಲೆಯ ಶಿಕ್ಷಕ ಸಿಬ್ಬಂದಿಗಳು, ಯೋಗ ಜಿಲ್ಲಾ ಫೆಡರೇಷನ್ನಿನ ಅಧ್ಯಕ್ಷರಾದ ಅನಿಲ್ ಕರಿ, ಸದಸ್ಯರುಗಳಾದ ಜೀ.ವಿ ಭಟ್, ವಿ.ಎಂ.ಭಟ್, ಶಾಲಾ ಶಿಕ್ಷಕ ವೃಂದ ಕಾ ರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಸೀತಾ ವಿ.ಭಟ್ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top