ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಕಾಲೇಜಿನ ಒಟ್ಟು 70 ವಿದ್ಯಾರ್ಥಿಗಳು ಹಾಜರಾಗಿದ್ದು 64 ವಿದ್ಯಾರ್ಥಿಗಳು ಉತ್ತೀರ್ಣರಾಗರುತ್ತಾರೆ. ಕಾಲೇಜಿನ ಫಲಿತಾಂಶವು ಶೇ. 91.42 ಆಗಿದೆ.
ವಾಣಿಜ್ಯ ವಿಭಾಗದ ಫಲಿತಾಂಶವು ಶೇ. 96.42 ಹಾಗೂ ಕಲಾ ವಿಭಾಗದ ಫಲಿತಾಂಶವು 71.42 ಆಗಿದೆ. ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ಅರ್ಪಿತಾ ಲಕ್ಷ್ಮಿಕಾಂತ ಹೆಗಡೆ(588/600,ಶೇ.98), ಅಶ್ವತ್ಥ ಜಿತೇಂದ್ರ ಹೆಗಡೆ(583/600,ಶೇ.97.01), ಕೇದಾರ ಅರುಣ ಭಟ್ಟ(577/600,ಶೇ.96.01) ಹಾಗೂ ಕಲಾ ವಿಭಾಗದಲ್ಲಿ ಕ್ರಮವಾಗಿ ಲಿಖಿತ ಪಟೆಲ್ ಮಹೇಶ ನಾಯ್ಕ(506/600,84.), ಪ್ರಭು ಯಲ್ಲಪ್ಪ ವಡ್ಡರ್(414/600,69.), ತೇಜಸ್ ಬಾಲಚಂದ್ರ ನಾಯ್ಕ(359/600,59.08) ಸ್ಥಾನಗಳನ್ನು ಪಡೆದಿದ್ದಾರೆ.
ಒಟ್ಟು 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ,32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.ವಿದ್ಯಾರ್ಥಿಗಳ ಯಶಸ್ಸಿಗೆ ಆಡಳಿತ ಮಂಡಳಿಯವರು,ಪ್ರಾಂಶುಪಾಲರು, ನೌಕರ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಪಿಯುಸಿ ರಿಸಲ್ಟ್: ಯಡಹಳ್ಳಿ ಪಿಯು ಕಾಲೇಜ್ ಶೇ.91.42 ಫಲಿತಾಂಶ
