
ಸಿದ್ದಾಪುರ: ಯುವ ಕಾಂಗ್ರೆಸ್ ವತಿಯಿಂದ ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಾದ ಕಿಲಾರ ಹಳಿಯಾಳ ಮುಟ್ಟಳ್ಳಿ ಗಾಳಿಜಡ್ಡಿ ಗ್ರಾಮಗಳಿಗೆ ಉತ್ತರಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಶಿ ನೇತೃತ್ವದಲ್ಲಿ ಭೇಟಿನೀಡಲಾಯಿತು.
ನೆರೆಯಿಂದ ಹಾನಿಯಾದ ಸ್ಥಳಗಳನ್ನು ವೀಕ್ಷಿಸಿ ಕಾಳಜಿ ಕೇಂದ್ರಗಳಾದ ಮುಟ್ಟಳ್ಳಿ ಹಳಿಯಾಳ ಗಾಳಿಜಡ್ಡಿಗೆ ತೆರಳಿ ನಿರಾಶ್ರಿತರಿಗೆ ಸಾಂತ್ವನ ಹೇಳಿ ಅಗತ್ಯವಸ್ತುಗಳಾದ ದಿನಸಿ ಹಾಗೂ ತರಕಾರಿಯನ್ನು ನೀಡಿ ಧೈರ್ಯತುಂಬಲಾಯಿತು.
ಈ ಸಂಧರ್ಭದಲ್ಲಿ ಸಿದ್ದಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ ಕಲ್ಮನೆ, ಹಾರ್ಸಿಕಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯ ಸಿದ್ದಾರ್ಥ್ ಗೌಡರ್, ಮಾಜಿ ತಾಲೂಕಪಂಚಾಯತ್ ಸದಸ್ಯ ರಾಜು ನಾಯ್ಕ್, ಮಾಜಿ ತಾಲೂಕ ಪಂಚಾಯತ್ ಸದಸ್ಯ ಮಂಜುನಾಥ್, ಕೆ ಪಿ ಸಿ ಸಿ ಸೋಶಿಯಮೀಡಿಯಾದ ಮಧುಸೂಧನ್ ಮಡಿವಾಳ್ ಹಾಗೂ ಪ್ರಮುಖರಾದ ಶ್ರೀಧರ್ ಹೆಗಡೆ ಹಲಸರಿಗೆ, ಗಣಪತಿ ನಾಗ್, ಪ್ರಶಾಂತ್ ಹೆಗಡೆ ಹಕ್ಕಿಮನೆ ಹಾಗೂ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.