ಶಿರಸಿ; ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ತನ್ನ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ “ಟಿ.ಎಸ್.ಎಸ್.ಸೆಲೆಕ್ಟ್”ಎನ್ನುವ ಸಗಟು ಮಾರಾಟ ಯೋಜನೆಯನ್ನು ರೂಪಿಸಿದ್ದು, ಇದಕ್ಕೆ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಇವರು ಜೂನ್ 17 ರಂದು ಅಧಿಕೃತ ಚಾಲನೆ ನೀಡಿದರು.
ನಗರ ಮತ್ತು ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿಯೂ ಟಿ.ಎಸ್.ಎಸ್.ಉತ್ಪನ್ನಗಳು ಗ್ರಾಹಕರಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು, ಅಂಗಡಿಕಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ವಿನಂತಿಸಿದರು. ಟಿ.ಎಸ್.ಎಸ್.ಉತ್ಪನ್ನಗಳ ಅಧಿಕೃತ ವಿತರಕರಾಗಿ ಚೈತನ್ಯ ಟ್ರೇಡರ್ಸ್ ಶಿರಸಿ (9481460249) ಇವರು ನಿಯೋಜಿತರಾಗಿದ್ದು, ಟಿ.ಎಸ್.ಎಸ್. ಕ್ಯಾಶ್ಯೂ (ಗೇರುಬೀಜ) ಉತ್ಪನ್ನಗಳ ವಿತರಕರಾಗಿ ನವಚೇತನ ಏಜೆನ್ಸೀಸ್ ಶಿರಸಿ (9972957666) ಇವರು ನಿಯೋಜಿತರಾಗಿದ್ದಾರೆ.
‘ಟಿ.ಎಸ್.ಎಸ್ ಸೆಲೆಕ್ಟ್’ ಸಗಟು ಮಾರಾಟ ಯೋಜನೆಗೆ ಚಾಲನೆ
