• Slide
    Slide
    Slide
    previous arrow
    next arrow
  • ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಮರ್ಥ

    300x250 AD

    ಯಲ್ಲಾಪುರ; ತಾಲೂಕಿನ ಭರತನಹಳ್ಳಿ  ದಂಡಿಗೆಮನೆಯ ಸಮರ್ಥ ವಿ. ಜೋಷಿ ಪಿಯುಸಿಯಲ್ಲಿ ಶೇ. 99.16   ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.

    ಈತ ಮೂಡಬಿದ್ರೆಯ ಆಳ್ವಾಸ್ ಪ್ರಿ ಯೂನಿವರ್ಸಿಟಿ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದು ಇಂಗ್ಲೀಷ್ 97,ಬ್ಯುಸಿನೆಸ್ ಸ್ಟಡೀಸ್ 98,ಸಂಸ್ಕೃತ,ಅಕೌಂಟನ್ಸಿ,ಸ್ಟಾಟಿಸ್ಟಿಕ್ಸ್,ಬೇಸಿಕ್ ಮಾಥ್ಸ್ ಗೆ 100ಕ್ಕೆ 100 ಪಡೆಯುವುದರೊಂದಿಗೆ  600 ಅಂಕಗಳಿಗೆ 595 ಅಂಕ ಪಡೆದಿದ್ದಾನೆ. ಈತ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು,ಮೃದಂಗ ವಾದನ ಕೂಡಾ ಅಭ್ಯಸಿಸುತ್ತಿದ್ದಾನೆ.
    ಅಧ್ಯಯನದೊಂದಿಗೆ ಇತರ ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಸಿಳ್ಳುವುದರಿಂದ ಒತ್ತಡ ನಿವಾರಣೆಯಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ.ಇದರಿಂದ ಓದಿದ್ದನ್ನು ಹೆಚ್ಚೆಚ್ಚು  ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ.ನಿರಂತರ ಅಧ್ಯಯನ,ಸತತ ಪರಿಶ್ರಮದಿಂದ ಈ ಅಂಕವನ್ನು ಪಡೆಯಲು ಸಾಧ್ಯವಾಯಿತು ಎಂಬುದು ಸಮರ್ಥನ ಅಭಿಪ್ರಾಯವಾಗಿದೆ.
    ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿ,ಪಾಲಕರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top