ಯಲ್ಲಾಪುರ ; ಪ್ರವಾದಿ ಹಜರತ್ ಮೊಹಮ್ಮದ್ ಸಲ್ಲಿಲ್ಲಾಹು ಅಲೈಹಿವ ಸಲ್ಲಂ ಅವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವ ನೂಪೂರ ಶರ್ಮ ಹಾಗೂ ನವೀನ ಜಿಂದಾಲ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದ ಮುಸ್ಲಿಂ ಸಮಾಜದ ಪ್ರಮುಖರು ಶುಕ್ರವಾರ ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಬಗ್ಗೆ ದೂರದರ್ಶನದ ಸಂದರ್ಶನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಮುಸ್ಲಿಂ ಸಮುದಾಯದವರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೇ ನೋವಾಗಿದೆ. ದೇಶದ ಕಾನೂನು ಮೇಲೆ ನಮಗೆ ವಿಶ್ವಾಸವಿದ್ದು,ಸಂವಿಧಾನ ವಿರುದ್ದವಾಗಿ, ನಮ್ಮ ಧರ್ಮ ಘನತೆಗೆ ಧಕ್ಕೆತರುವಂತೆ ಮಾಡಲಾಗಿದೆ. ಇದರಿಂದ ಶಾಂತಿ ಸೌಹಾರ್ದತೆಗೆ ಭಂಗ ಉಂಟು ಮಾಡುವಂತಾಗಿದೆ. ಅವಹೇಳನಾಕಾರಿ ಹೇಳಿಕೆ ನೀಡಿರುವವರನ್ನು ಪಕ್ಷದಿಂದ ಉಚ್ಚಾಟಿಸಿರುವುದರಿಂದ ಶಿಕ್ಷೆ ಆಗುವುದಿಲ್ಲ.ಕಾರಣ ಅವರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮೊಹಲ್ಲಾ ಗೌಸಿಯಾ ಮಸಜೀದ್ ಅಧ್ಯಕ್ಷ ಅಬ್ದುಲ್ ಕರಿಂ ಉಮರ ಶೇಖ್,ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರೆಹೆಮಾನ್ ಸೈಯ್ಯದ್,ಬಿಲಾಲ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ ಮಾಂಡಲಿಕ,ಗರಿಬ ನವಾಬ್ ಮಸೀದಿ ಕಾರ್ಯದರ್ಶಿ ಮೊಯ್ದು ಟಿ.ಪಿ,ಮೊಹಮ್ಮದಿಯಾ ಮಸೀದಿ ಅಧ್ಯಕ್ಷ ಇರ್ಷಾದ ಕಾಗಲಕರ್,ಇಮಾಮ್ ವಿ ಗಝಾಲಿ ಮಸೀದಿ ಅಧ್ಯಕ್ಷ ಯೂಸೂಫ್ ಮುಗದ್ ಹಾಗೂ ಮುಸ್ಲಿಂ ಸಮಾಜದ ಪ್ರಮುಖರು ಇದ್ದರು.ವೀಡಿಯೋ ನೋಡಿ:
ಅವಹೇಳನಾಕಾರಿ ಹೇಳಿಕೆ ಹಿನ್ನೆಲೆ;ನೂಪೂರ ಶರ್ಮ,ನವೀನ ಜಿಂದಾಲ್ ಬಂಧನಕ್ಕೆ ಆಗ್ರಹ
