ಯಲ್ಲಾಪುರ; ಬಿಜಾಪುರದಿಂದ ಕೆರಳಕ್ಕೆ ಅನಧಿಕೃತವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವಿನ ಮೇರೆಗೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಪಟ್ಟಣದ ಜೋಡಕೆರೆ ಚೆಕ್ ಪೋಸ್ಟ ಬಳಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಇತ್ತೀಚಿಗೆ ವಶಕ್ಕೆ ಪಡೆದಿದ್ದಾರೆ.
ಆರೋಪಿತರಾದ ಮಹಮ್ಮದ್ ಶೋಪಿಯಾನ ಅಬ್ದುಲ್ ಹಕಿಂ ಪುತ್ತೂರು,ಸಮೀರ ಟಿಎ ಟಿ ಅಬುಕರ ಕಾಸರಗೋಡ,ಇವರನ್ನು ವಶಕ್ಕೆ ಪಡೆದಿದ್ದು,ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ.ಆರೋಪಿತರಿಂದ 1 ಕೆ.ಜಿ.180 ಗ್ರಾಂ ಗಾಂಜಾ,ಸ್ವೀಪ್ಟ್ ಕಾರು,ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಸುಮನ್ ಪನ್ನೇಕರ,ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರು,ಪಿಎಸೈಗಳಾದ ಮಂಜುನಾಥ ಗೌಡರ್,ಅಮೀನಾ ಸಾಬ್ ಅತ್ತರ,ಸಿಬ್ಬಂದ್ದಿಗಳಾದ ವಿಠ್ಠಲ್ ಮಲವಾಡಕರ್,ದೀಪಕ ನಾಯ್ಕ,ನಾಗಪ್ಪ ಲಮಾಣಿ,ರಾಜೇಶ ನಾಯ್ಕ,ಮಂಜಪ್ಪ ಪೂಜಾರಿ,ಭೀಮಪ್ಪ ಕಾನಾಪುರ,ಮುತ್ತಪ್ಪ ಬೋವಿ,ಪ್ರಸಾದ ತಳೆಕರ್,ಗಿರೀಶ ಲಮಾಣಿ,ಕೃಷ್ಣ ಮಾತ್ರೋಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗಾಂಜಾ ಸಾಗಾಟ:ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ,ಓರ್ವ ಪರಾರಿ
