ಯಲ್ಲಾಪುರ;ಲಾರಿಯೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಎರಡೂ ಲಾರಿಗಳು ಜಖಂಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಬೀರಗದ್ದೆ ಕ್ರಾಸ್ ಬಳಿ ನಡೆದಿದೆ.
ಲಾರಿ ಚಾಲಕ ಇಮ್ರಾನ್ ಖಾಸೀಂ ಲಾರಿಯನ್ನು ಯಲ್ಲಾಪುರದಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಬಂದು, ಬೀರಗದ್ದೆ ಕ್ರಾಸ್ ಬಳಿ ಯಾವುದೇ ಸಿಗ್ನಲ್ ಕೊಡದೇ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಎರಡೂ ಲಾರಿಗಳು ಜಖಂಗೊಂಡಿದ್ದು, ಚಾಲಕ-ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಎರಡೂ ಲಾರಿಗಳ ಚಾಲಕರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಲಾರಿ;ಪ್ರಕರಣ ದಾಖಲು
