ಯಲ್ಲಾಪುರ: ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯವನ್ನು ಕಾಪಾಡುವುದು ಒಂದು ದಿನದ ಕೆಲಸವಲ್ಲ. ಗಿಡ ನೆಟ್ಟು, ಬೆಳೆಸುವ ಕೆಲಸ ನಿರಂತರ ನಡೆಯಬೇಕು. ಎಲ್ಲರೂ ಹೊಣೆಯರಿತು ಕೈಜೋಡಿಸಿದಾಗ ಅದು ಸುಲಭವಾಗುತ್ತದೆ ಎಂದು ಮಂಚೀಕೇರಿ ವಲಯ ಅರಣ್ಯ ಅಧಿಕಾರಿಗಳಾದ ಕಲ್ಲಪ್ಪ ಅವರು ಮಾತನಾಡುತ್ತ ಹೇಳಿದರು.
ಅವರು ಉಮ್ಮಚ್ಗಿ ಗ್ರಾ.ಪಂ.ವ್ಯಾಪ್ತಿಯ ಕೋಟೆಮನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಮ್ಮಚ್ಗಿ, ಅರಣ್ಯಾಧಿಕಾರಿಗಳ ಕಚೇರಿ ಮಂಚೀಕೇರಿ,ಎಸ್.ಡಿ.ಎಂ.ಸಿ.ಕೋಟೆಮನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಂಚೀಕೇರಿ ವಲಯ ಮೇಲ್ವಿಚಾರಕ ಗಣಪತಿ,ಸಿ.ಆರ್.ಪಿ.ವಿಷ್ಣು ಭಟ್ಟ,ಎಸ್ಡಿಎಂಸಿ ಅಧ್ಯಕ್ಷೆ ಇಂದಿರಾ ಸಿದ್ದಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಸರಸ್ವತಿ ನಾಯ್ಕ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿ,ವಂದನಾರ್ಪಣೆ ಸಲ್ಲಿಸಿದರು.