• Slide
    Slide
    Slide
    previous arrow
    next arrow
  • ಹನುಮಂತಿ ಡೇರಿಯಲ್ಲಿ ವಿಶ್ವ ಯೋಗ ದಿನಾಚರಣೆ

    300x250 AD

    ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಶಿರಸಿಯ ಹನುಮಂತಿಯ ಹಾಲು ಪ್ಯಾಕಿಂಗ್ ಘಟಕದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕೇಂದ್ರ ಸರಕಾರ ಹಾಗೂ ಒಕ್ಕೂಟದ ಕೇಂದ್ರ ಕಚೇರಿಯ ನಿರ್ದೇಶನದಂತೆ ಜೂನ್.17 ರ ಶುಕ್ರವಾರದಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರ ನೇತ್ರತ್ವದಲ್ಲಿ ಯೋಗಪಟು ಶ್ರೀಕಾಂತ ಹೆಗಡೆ ಅಗಸಾಲ ಅವರ ಮಾರ್ಗದರ್ಶನದಂತೆ ಯೋಗ ಮಾಡುವುದರ ಮೂಲಕ ಆಚರಿಸಲಾಯಿತು.
    ಈ ಸಂದರ್ಭದಲ್ಲಿ ಸುರೇಶ್ಚಂದ್ರ ಹೆಗಡೆ ಮಾತನಾಡಿ ಜೀವನದುದ್ದಕ್ಕೂ ಉತ್ತಮ ಆರೋಗ್ಯ ಹೊಂದಲು ದಿನನಿತ್ಯ ಯೋಗಾಭ್ಯಾಸವನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮೆಲ್ಲರ ಮನಸ್ಸಿನ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
    ಯೋಗ ಮಾರ್ಗದರ್ಶನ ಮಾಡಿದ ಯೋಗಪಟು ಶ್ರೀಕಾಂತ ಹೆಗಡೆ ಅಗಸಾಲ ಅವರು ದಿನನಿತ್ಯದ ಯೋಗಾಭ್ಯಾಸದಿಂದ ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ ನಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದರು. ಒಂದು ಸ್ವಾಸ್ಥ್ಯ ಹಾಗೂ ಸದೃಢ ಸಮಾಜವನ್ನು ನಿರ್ಮಿಸಲು ನಾವು ದಿನನಿತ್ಯ ಮಾಡುವ ಉತ್ತಮ ಯೋಗಾಭ್ಯಾಸದಿಂದ ಸಾಧ್ಯವಾಗಿದೆ, ನಾವೆಲ್ಲರೂ ಯೋಗವನ್ನು ಕಲಿತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇತರರಿಗೆ ಯೋಗವನ್ನು ಮಾರ್ಗದರ್ಶನ ಮಾಡವಂತಾಗಬೇಕೆಂದು ಈ ಮೂಲಕ ಅವರು ಕರೆ ನೀಡಿದರು.
    ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಪಶುರಾಮ ವಿ ನಾಯ್ಕ, ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್ ಎಸ್ ಆರ್, ಶೀತಲ ಕೆಂದ್ರದ ವ್ಯವಸ್ಥಾಪಕರಾದ ಕೃಷ್ಣಕೆ ಎ ಎನ್, ಮಾರುಕಟ್ಟೆ ಅಧಿಕಾರಿ ಶರಣು ಮೆಣಸಿನಕಾಯಿ, ಅಜ್ಜಪ್ಪ, ವಿಸ್ತರಣಾಧಿಕಾರಿಗಳಾದ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಶೀತಲ ಕೇಂದ್ರದ ದಯಾನಂದ ಎಂ ಬೋರ್ಕರ್, ಸಾಗರ್, ಪ್ರಸಾದ ನಾಯ್ಕ, ಶ್ರೇಯಾ ನಾಯಕ್ ಹಾಗೂ ಸಿಬ್ಬಂದಿಗಳು ಯೋಗಾಭ್ಯಾಸ ಮಾಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top