ಶಿರಸಿ: ನಗರದ ಹೊಟೆಲ್ ಸುಪ್ರಿಯಾ ಇಂಟನ್ಯಾಷನಲ್ ನಲ್ಲಿ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಜೂ.18, ಶನಿವಾರದಂದು ಮಂಜಾನೆ 10.30 ಘಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಸೋಲೂರಿನ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ರೇಣುಕಾ ಪೀಠ, ಆರ್ಯ ಈಡಿಗ ಮಹಾಸಂಸ್ಥಾನ, ಇವರು ಸಾನಿಧ್ಯ ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಜೆ.ಪಿ. ಸುಧಾಕರ್, , ಜ.ಪಿ.ಎನ್.ಪಿ. ಬೆಂಗಳೂರು, ಹಾಗೂ ಭೀಮಣ್ಣ ಟಿ. ನಾಯ್ಕ, ಇವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಸಂಚಾಲಕ ಡಾ| ನಾಗೇಶ ಎಚ್. ನಾಯ್ಕ ಕಾಗಾಲ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯ ಈಡಿಗ ಮಹಾಸಂಸ್ಥಾನದ ಉಪಾಧ್ಯಕ್ಷರು ಡಾ| ಲಕ್ಷ್ಮಿ ನರಸಯ್ಯ,ಚಾಲಪ್ಪ ಅಕಾಡೆಮಿ ಸೋಲೂರ ಅಧ್ಯಕ್ಷರು ಎಚ್. ಎಲ್. ಶಿವಾನಂದ,ಪ್ರಜಾವಾಣಿ ನಿವೃತ್ತ ಸಹ ಸಂಪಾದಕರಾದ ಲಕ್ಷ್ಮಣ ಕೊಡಸೆ, , ಶ್ರೀಮತಿ ಲತಾ ಸುಧಾಕರ, ಮಂಗಳೂರು ಎ.ಸಿ.ಪಿ ಎಸ್. ಮಹೇಶಕುಮಾರ , ಶಿರಸಿ ನಗರ ಸಭೆ ಅಧ್ಯಕ್ಷರಾದ ಗಣಪತಿ ನಾಯ್ಕ, ಮಾರಿಕಾಂಬಾ ಧರ್ಮದರ್ಶಿ ಮಂಡಳಿ ಅಧ್ಯಕ್ಷರಾದ ರವೀಂದ್ರ ಜಿ. ನಾಯ್ಕ ,ಜೆ.ಪಿ.ಎನ್.ಪಿ.ಖಜಾಂಚಿ ಎಂ.ಆರ್. ಪೂರ್ಣೇಶ್ , ಶ್ರೀಮತಿ ಕುಸುಮ ಅಜಯ್ , ಸಿ.ಎಫ್. ನಾಯ್ಕ, ಅರೋಣದಯ ಟ್ರಸ್ಟ ಅಧ್ಯಕ್ಷರಾದ ಸತೀಶ ಪಿ. ನಾಯ್ಕ, ರವೀಂದ್ರ ನಾಯ್ಕ, ಸುನೀಲ್ ನಾಯ್ಕಇವರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.