ಶಿರಸಿ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಜೂನ್ 17ರಂದು ‘ಹಸಿರು ಮಾಸ’ ಸಸ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಮ. ಹೆಗಡೆ ಹೀಪನಳ್ಳಿ, ಪ್ರಧಾನ ವ್ಯವಸ್ಥಾಪಕರಾದ ರವೀಶ ಅ. ಹೆಗಡೆ, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು.
ಹಸಿರು ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಶಿರಸಿಯ ಕ್ಯಾಂಪ್ಕೋ ಕಚೇರಿ ಹತ್ತಿರ ನಡೆಯುವ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಅಡಿಕೆ ಗಿಡ, ಜಿ-9 ಬಾಳೆ, ಲಿಂಬೆ, ಹೈಬ್ರಿಡ್ ತೆಂಗು, ಏಲಕ್ಕಿ, ವೆನಿಲ್ಲಾ, ವೆಂಗುರ್ಲಾ-7 ಗೇರು, ಮಲ್ಲಿಕಾ & ಆಪೂಸ್ ಮಾವಿನ ಸಸಿಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು ಹಾಗೂ ಸರ್ವ ಸಾಂಬಾರ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಸಂಘದಲ್ಲಿ ವ್ಯವಹಾರ ಹೊಂದಿದ ಪ್ರತಿಯೊಬ್ಬ ಸದಸ್ಯರಿಗೆ ಗರಿಷ್ಠ 25 ಕಾಳುಮೆಣಸಿನ ಬಳ್ಳಿಗಳನ್ನು ರೂ.5 ರವಿಶೇಷ ರಿಯಾಯಿತಿ ದರದಲ್ಲಿನೀಡಲಾಗುತ್ತಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
TSS ನಲ್ಲಿ ‘ಹಸಿರು ಮಾಸ’ ಸಸ್ಯ ಪ್ರದರ್ಶನಕ್ಕೆ ಚಾಲನೆ
