ಹಳಿಯಾಳ: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂದತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ಸ್ಥಳೀಯ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಘಟಕ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರರಾದ ರತ್ನಾಕರ ಅವರಿಗೆ ಸಲ್ಲಿಸಿದರು.
ಹಿಂದೂ ಸಂಪ್ರದಾಯದಂತೆ ಆಚರಿಸಲಾಗುವ ಕೆಲ ಹಬ್ಬಗಳಿಗೆ ಅಡೆ-ತಡೆಯನ್ನು ಉಂಟುಮಾಡುವುದು, ದೇಶದಲ್ಲಿ ಸುಸಜ್ಜಿತವಾಗಿ ನಡೆಯುತ್ತಿದೆ ಹಿಂದೂ ಕಾರ್ಯಕರ್ತರ ಹತ್ಯೆ, ದೇಶಾದ್ಯಂತ ವಿಷಕಾರಿ ಭಾಷಣ ಮಾಡುವುದು, ಹೀಗೆ ಹಲವಾರು ರೂಪದಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಬೇಕು ಮತ್ತು ಹಿಂದೂಗಳ ಅಲ್ಪಸಂಖ್ಯಾತವಾಗಿರುವ ಸ್ಥಳಗಳಲ್ಲಿ ಅವರಿಗೆ ಭದ್ರತೆ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶ್ರೀಪತಿ ಭಟ್, ಭಜರಂಗದಳದ ಸಂಯೋಜಕರಾದ ಸರ್ವೇಶ ಖಾಂದೋಳಕರ, ನಿಖಿಲ ತೋರ್ಲೇಕರ, ಗ್ರಾಮಾಂತರ ಭಾಗದ ಕೆಲ ಕಾರ್ಯಕರ್ತರು ಇದ್ದರು.