ಶಿರಸಿ: ನಗರದ ಟಿಎಸ್ಎಸ್ ರಸ್ತೆಯ ಎಪಿಎಂಸಿ ಗೇಟ್ ಬಳಿ ಕಾರೊಂದು ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲಿಸುತ್ತಿದ್ದ ಓರ್ವ ಮಹಿಳೆಗೆ ಕುತ್ತಿಗೆ ಬಳಿ ತೀವ್ರ ಗಾಯಗಳಾಗಿದ್ದವು. ಈ ಅಪಘಾತದ ಸಿಸಿಟಿವಿ ವಿಡಿಯೋ ದೊರಕಿದ್ದು ಚಾಲಕನ ನಿರ್ಲಕ್ಷತನ ಸಾಬೀತಾಗಿದೆ.
ಚಾಲಕನು ತಿರುವಿನಲ್ಲಿ ಅಡ್ಡಾದಿಡ್ಡಿ ಚಲಿಸಿ, ಮುಂದೆ ಸಾಗುತ್ತಿದ್ದ ಎರಡು ಸ್ಕೂಟಿಗಳಿಗೆ ಹಿಂಬದಿಯಿಂದ ಗುದ್ದಿ, ಅಪಘಾತಪಡಿಸಿದ್ದಾನೆ. ಗಂಭೀರ ಗಾಯಗಳಾಗಿರುವ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದ್ದು, ಈಕೆ ನಗರದ ಶಿವಾಜಿ ಚೌಕಿನಲ್ಲಿರುವ ಮೆಡಿಕಲ್ ಅಂಗಡಿಯ ಮಾಲೀಕರಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿದ್ದ ಚಾಲಕ ನಾಪತ್ತೆಯಾಗಿದ್ದು, ಶಿರಸಿ ಹೊಸ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.