• Slide
    Slide
    Slide
    previous arrow
    next arrow
  • ಜೂ.18,19ರಂದು ಸೋಂದಾ ಇತಿಹಾಸೋತ್ಸವ

    300x250 AD

    ಶಿರಸಿ: ಸೋಂದಾದ ಮೂರು ಧರ್ಮ ಪೀಠಗಳಾದ ಸ್ವರ್ಣವಲ್ಲೀ ಮಠ,ವಾದಿರಾಜಮಠ,ಜೈನಮಠ ,ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಮಿಥಿಕ್ ಸೊಸೈಟಿ, ಜಾಗೃತ ವೇದಿಕೆ ಸೋಂದಾ,ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿ,ರಂಗ ಚರಿತ ಸೋಂದಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಜನವರಿಯಲ್ಲಿ ನಿಗದಿಯಾಗಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಸೋಂದಾ ಇತಿಹಾಸೋತ್ಸವ,ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 18 ಮತ್ತು 19 ರಂದು ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ.
    ರಾಷ್ಟ್ರಮಟ್ಟದ ಈ ಸಮ್ಮೇಳನವನ್ನು ಸ್ವರ್ಣವಲ್ಲೀ ಶ್ರೀಗಳವರು ಮತ್ತು ಜೈನಮಠದ ಶ್ರೀಗಳವರು ಉದ್ಘಾಟಿಸಲಿದ್ದು,ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಪ್ರಾಚೀನ ಭಾರತದ ವಿಜ್ಞಾನ ಸಂಶೋಧಕರಾದ ಡಾ.ಸುಂದರ ರಾಜನ್ ಬೆಂಗಳೂರು ಇವರು ವಹಿಸಿಕೊಳ್ಳಲಿದ್ದಾರೆ.ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಯನ್ನು ಖ್ಯಾತ ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿಯವರು ಸ್ವೀಕರಿಸಲಿದ್ದಾರೆ.ಮೊದಲನೇ ದಿನ ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರವಾರ,ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಪರಂಪರೆ ಇಲಾಖೆಯ ರಾಜ್ಯ ನಿರ್ದೇಶಕರಾದ ಡಾ.ಗೋಪಾಲ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಪ.ರಾ.ಕೃಷ್ಣಮೂರ್ತಿ ಇವರುಗಳು ಭಾಗವಹಿಸಲಿದ್ದಾರೆ.

    ಈ ಸಂದರ್ಭದಲ್ಲಿ ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ಅವರು ರಚಿಸಿದ ಬೆಂಗಳೂರಿನ ಕದಂಬ ಪ್ರಕಾಶನ ಹೊರತರುತ್ತಿರುವ ಕಿರುಕಾದಂಬರಿ ” ಅನುರಾಯ ಶಾಲ್ಮಲೆ” ಸದಾಶಿವರಾಯನ ನಿಗೂಢ ಆತ್ಮಕಥನ ಲೋಕಾರ್ಪಣೆಗೊಳ್ಳಲಿದೆ.ಈ ವರ್ಷ ‘ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರಾಚೀನ ಭಾರತದ ಕೊಡುಗೆಗಳು ‘ ಎಂಬ ವಿಷಯದಲ್ಲಿ ನಾಲ್ಕು ಪ್ರಧಾನ ಗೋಷ್ಠಿ ಹಾಗು ಎರಡು ಉಪಗೋಷ್ಠಿಗಳು ನಡೆಯಲಿವೆ.ಪ್ರಾಚೀನ ಭಾರತದ ನಗರ ವಾಸ್ತು ವಿಜ್ಞಾನ, ನೌಕಾ ತಂತ್ರಜ್ಞಾನ, ಕೃಷಿ ವಿಜ್ಞಾನ, ನೀರಾವರಿ ತಂತ್ರಜ್ಞಾನ, ಯೋಗ ವಿಜ್ಞಾನ, ಚಿಕಿತ್ಸಾ ಪದ್ಧತಿಯ ಇತಿಹಾಸ,ಖಗೋಳ ವಿಜ್ಞಾನ, ಪ್ರಾಚೀನ ಭಾರತದ ಶಾಸ್ತ್ರ ಗ್ರಂಥಗಳು, ಈ ವಿಷಯಗಳ ಕುರಿತು ಡಾ.ಅನುರಾಧಾ.ವಿ. ಡಾ.ಲ.ನ.ಸ್ವಾಮಿ, ಡಾ.ನರಸಿಂಹನ್,ಡಾ.ಹರಿಹರ ಶ್ರೀನಿವಾಸ ರಾವ್,ಡಾ.ಕೋಟೆಮನೆ ರಾಮಚಂದ್ರ ಭಟ್,ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ,ಡಾ.ಶ್ರೀನಾಥ್ ರತ್ನಕುಮಾರ್,ಡಾ.ಜಯಸಿಂಹ,ಇವರುಗಳು ವಿಷಯ ಮಂಡಿಸಲಿದ್ದಾರೆ. ಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ.ಸಿ.ಎಸ್ ವಾಸುದೇವನ್,ಡಾ.ರಾಜಾರಾಮ್ ಹೆಗಡೆ,ಡಾ.ರಮೇಶ್ ನಾಯಕ್,ನರೇಂದ್ರ ಕೆ.ವಿ.ಡಾ.ಟಿ.ಎಸ್ ಹಳೆಮನೆ.ಡಾ.ವೆಂಕಟರಾವ್ ಪಲಾಟೆ ಇವರುಗಳು ವಹಿಸಿಕೊಳ್ಳಲಿದ್ದಾರೆ.ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಸಮ್ಮೇಳನದ ಆಶಯ ನುಡಿಗಳನ್ನು ಆಡಲಿದ್ದಾರೆ.

    ಎರಡನೇ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀಗಳವರು ಸಾನ್ನಿಧ್ಯ ನೀಡಲಿದ್ದು ಖ್ಯಾತ ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿಯವರಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನವಾಗಲಿದೆ.ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್,ಪರಂಪರೆ ಇಲಾಖೆಯ ನಿರ್ದೇಶಕರಾದ ಡಾ.ಗೋಪಾಲ್,ಹಂಪಿ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಮರೇಶ್ ಯತಗಲ್,ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಹನುಮಂತಪ್ಪ ನಿಟ್ಟೂರ್,ಸಾಹಿತಿ ಸಂತೋಷ್ ಕುಮಾರ್ ಮೆಹೆಂದಳೆ ಭಾಗವಹಿಸಲಿದ್ದಾರೆ.

    300x250 AD

    ಸಮ್ಮೇಳನದ ಮೊದಲ ದಿನ ಸಂಜೆ ಸಾಂಸ್ಕೃತಿಕ ಸಂಭ್ರಮವಿರಲಿದ್ದು ಶಿರಸಿಯ ಯಕ್ಷಗೆಜ್ಜೆ ತಂಡದವರಿಂದ ಬೊಮ್ಮಯ್ಯ ಗಾಂವ್ಕರ್ ವಿರಚಿತ ಐತಿಹಾಸಿಕ ಯಕ್ಷಗಾನ ‘ ಚಾಲುಕ್ಯ ವರ್ಧನ ‘ ಪ್ರದರ್ಶಿತಗೊಳ್ಳಲಿದೆ.ವಿಶೇಷ ಆಕರ್ಷಣೆಯಾಗಿ ಹೈದ್ರಾಬಾದ್ ನ ಮೋಹನ ಆರ್ ಅವರಿಂದ ಆದಿಮಾನವ ವಿರಚಿತ ಬಂಡೆಗಲ್ಲು ಚಿತ್ರಗಳ ಪ್ರದರ್ಶನ ಇರಲಿದೆ.ಮಿಥಿಕ್ ಸೊಸೈಟಿಯ ಉದಯ್ ಕುಮಾರ್ ಅವರಿಂದ ಶಾಸನಗಳ ಡಿಜಿಟಲೀಕರಣ ಪ್ರಾತ್ಯಕ್ಷಿಕೆ ಇರಲಿದೆ.ಪ್ರಾಚೀನ ಭಾರತದ ವಿಜ್ಞಾನ ತಂತ್ರಜ್ಞಾನದ ಭವ್ಯ ಅನಾವರಣ ಈ ವರ್ಷದ ಇತಿಹಾಸೋತ್ಸವದ ವಿಶೇಷವಾಗಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top