ಶಿರಸಿ; ಉತ್ತರಕನ್ನಡ ಜಿಲ್ಲಾ ಯೋಗ ಫೆಡರೇಷನ್(ರಿ) ಶಿರಸಿ ಆಶ್ರಯದಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್,IMA, ನಯನಾ ಫೌಂಡೇಶನ್, ನಿಸರ್ಗ ಟ್ರಸ್ಟ್ , ಸೀನಿಯರ್ ಚೇಂಬರ ಇಂಟರ್ ನ್ಯಾಷನಲ್, ಮನುವಿಕಾಸ, ಎಲ್ಲ ಸರಕಾರಿ ಇಲಾಖೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವಯೋಗ ದಿನಾಚರಣೆಯನ್ನು ಜೂ. 21 ಮಂಗಳವಾರ ಬೆಳಗ್ಗೆ 5.45 ರಿಂದ 7.30ರವರೆಗೆ ಲಯನ್ಸ್ ಶಾಲಾ ಆವರಣದ ಲಯನ್ಸ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಯೋಗ ಜಾಗೃತಿ ಕಾರ್ಯದಲ್ಲಿ ನಿರಂತರ ತೊಡಗಿಕೊಂಡಿರುವ ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಶಿರಸಿ, ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಮಾನವೀಯತೆಗಾಗಿ ಯೋಗ’ ಧೈಯವಾಕ್ಯದೊಂದಿಗೆ 8ನೇಯ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ಅನೇಕ ಯೋಗ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಯೋಗ ಗುರು, ಯೋಗ ಚಿಕಿತ್ಸಕ, ಯೋಗವನ್ನು ಅತ್ಯಂತ ಸ್ಪಷ್ಟವಾಗಿ ವೈಜ್ಞಾನಿಕ ಮಾಹಿತಿಯೊಂದಿಗೆ ತಿಳಿಸಿಕೊಡುವ ಅಪಾರ ಶಿಷ್ಯ ಬಳಗ ಹೊಂದಿರುವ ಶಂಕರನಾರಾಯಣ ಶಾಸ್ತಿಯವರು ಹಾಗೂ ಆಯುರ್ವೇದ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಿ ಚಳ್ಳಕೆರೆ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಬೆಂಗಳೂರಿನಲ್ಲಿ ‘ಆಯುರ್ಮಟ್ರಿಕ್ಸ್’ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿರುವ ಡಾ|| ಮಮತಾ ಭಾಗವತ ಇವರುಗಳು ಶಿರಸಿಯ ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಜೂ.16 ರಿಂದ ಜೂ.20 ರವರೆಗೆ ಈ ಕೆಳಗಿನ ಸ್ಥಳಗಳಲ್ಲಿ ನಡೆಸಿಕೊಡಲಿದ್ದಾರೆ.
ಜೂ. 16, ಗುರುವಾರ– IMA ಸಭಾಭವನ, TSS ಪ್ಯಾರಾ ಮೇಡಿಕಲ್ ಕಾಲೇಜು, ದಿವಗಿ ಇಂಡಸ್ಟ್ರೀಸ್, ರಾಮಕೃಷ್ಣ ಸ್ಟುಡೆಂಟ್ ಹೋಮ್
ಜೂ. 17, ಶುಕ್ರವಾರ– IMA ಸಭಾಭವನ, TSS ಪ್ಯಾರಾ ಮೇಡಿಕಲ್ ಕಾಲೇಜು, ದಿವಗಿ ಇಂಡಸ್ಟ್ರೀಸ್, ರಾಮಕೃಷ್ಣ ಸ್ಪೂಡೆಂಟ್ ಹೋಮ್
ಜೂ. 18, ಶನಿವಾರ– ಉಪಕಾರಾಗೃಹ ಶಿರಸಿ, ಲಯನ್ಸ್ ಶಾಲೆ,ಗಣೇಶ ನೇತ್ರಾಲಯ, ಸಂಚಲನ ಅಶೋಕ ನಗರ
ಜೂ. 19, ರವಿವಾರ ಯೋಗ ಮಂದಿರ, ಉಪಕಾರಾಗೃಹ ಶಿರಸಿ, ವೆಂಕಟ್ರಮಣ ದೇವಸ್ಥಾನ, ರಾಮಕೃಷ್ಣ ಸ್ಪೂಡೆಂಟ್ ಹೋಮ್
ಜೂ. 20, ಸೋಮವಾರ– ಉಪಕಾರಾಗೃಹ ಶಿರಸಿ, ಚಂದನ ಪಿಯು ಕಾಲೇಜು, ಲಯನ್ಸ್ ಭವನ (ಶಾಲಾ ಶಿಕ್ಷಕರಿಗಾಗಿ), ರಾಮಕೃಷ್ಣ ಸ್ಪೂಡೆಂಟ್ ಹೋಮ್
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅನಿಲ್ ಕರಿ- 9845329306, ಶ್ರೀಕಾಂತ್ ಹೆಗಡೆ -9986075746, ಜಿ.ವಿ.ಭಟ್- 9481445466