ಯಲ್ಲಾಪುರ: ಜಿಲ್ಲೆಯಲ್ಲಿ ಮಳೆಗಾಲ ಬಹುತೇಕ ಆರಂಭವಾಗಿದ್ದು, ಜಲಪಾತಗಳು ನಿಧಾನವಾಗಿ ಮೈತುಂಬಿಕೊಳ್ಳುತ್ತಿವೆ. ಯಲ್ಲಾಪುರ ತಾಲೂಕಿನ ರಾಜ್ಯ ಪ್ರಸಿದ್ಧ ಮಾಗೋಡ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಮಾಗೋಡ ಜಲಪಾತದ ಈ ಅಪರೂಪದ ಡ್ರೋನ್ ದೃಶ್ಯ ಆಕರ್ಷಕವಾಗಿ ಕಂಡು ಬರುತ್ತಿದೆ.
ದಟ್ಟ ಹಚ್ಚು ಹಸಿರಿನ ಕಾನನದ ನಡುವೆ ಮೈದುಂಬಿ ಭೋರ್ಗರಿಸುವ ಮಾಗೋಡು ಜಲಪಾತದ ರಮ್ಯ ರಮಣೀಯ ವೈಭವದ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಮಂಜುವಿನ ಹೊದಿಕೆಯನ್ನು ಹೊದ್ದಂತೆ ಕಾಣುವ ಈ ಜಲಪಾತದ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲ ಎನಿಸುತ್ತದೆ.
ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆಗಳು ಈ ಕೂಡಲೇ ಕಾರ್ಯನ್ಮುಖರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವೀಡಿಯೋ ನೋಡಲು ಲಿಂಕ್ ಒತ್ತಿ: https://youtu.be/LyGDqFXRxV