
ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಗ್ರಾ.ಪಂ.ದ ಸೂರಿಮನೆಯಲ್ಲಿ ಶಾಲ್ಮಲಾ ನದಿಗೆ ಸ್ಥಳೀಯರು ಕಟ್ಟಿಕೊಂಡ ಕಾಲುಸಂಕ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು ಊರಿನವರು ಓಡಾಟ ಸಾಧ್ಯವಾಗದೇ ಅತಂತ್ರರಾಗಿದ್ದಾರೆ.
ಕಳೆದ ಮೂವತ್ತುಕ್ಕೆ ಹೆಚ್ಚು ವರುಷದಿಂದ ಊರಿನವರು ಬಿದಿರು ಹಾಗೂ ಮರಮುಟ್ಟುಗಳನ್ನು ಬಳಸಿ ಕಾಲುಸಂಕವನ್ನು ಕಟ್ಟಿಕೊಂಡು ಮಳೆಗಾಲದಲ್ಲಿ ಓಡಾಟ ಮಾಡುತ್ತಿದ್ದರು. ಮಳೆಗಾಲವಿಡಿ ಈ ಊರಿನ ಹಲವು ಕುಟುಂಬಗಳಿಗೆ ಈ ಕಾಲುಸಂಕವೇ ಗತಿಯಾಗಿದ್ದು, ನೀರಿನ ಪ್ರವಾಹಕ್ಕೆ ಕಟ್ಟಿಕೊಂಡ ಸಂಕ ತೇಲಿ ಹೋಗಿದ್ದರಿಂದ ಓಡಾಟ ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಸಂಕ ಹೆಮ್ಮಾಡಿ – ಸೂರೀಮನೆ ಸಂಪರ್ಕದ ಕೊಂಡಿಯಾಗಿದ್ದು, ಆ ಭಾಗದವರಿಗೆ ಮಳೆಗಾಲದ ಸಮಯದಲ್ಲಿ ಶಾಲಾ ಮಕ್ಕಳಿಗೆ, ಕೂಲಿಗೆ ಹೋಗುವವರ ಓಡಾಟಕ್ಕೆ ಈ ಸಂಕವೇ ಅನಿವಾರ್ಯ ವಾಗಿದ್ದು ಈಗ ಸಂಕ ತೇಲಿ ಹೋಗಿರುವುದರಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ